ಗೋದಾಮು, ಸಂತೆಕಟ್ಟೆ ಕಾಮಗಾರಿಗೆ ಎಸ್ಸೆಸ್ ಚಾಲನೆ

ದಾವಣಗೆರೆ :

      ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಗೋದಾಮು ಮತ್ತು ಸಂತೆಕಟ್ಟೆ ಕಾಮಗಾರಿಗಳಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.

       ಭಾನುವಾರ ಬಿಸ್ಲೇರಿ, ಹದಡಿ, ಕುಕ್ಕವಾಡ, ತುರ್ಚಘಟ್ಟ ಮತ್ತು ಬೆಳವನೂರು ಗ್ರಾಮಗಳಲ್ಲಿ ಗೋದಾಮು ಮತ್ತು ಸಂತೆಕಟ್ಟೆ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಿದ ಶಾಸಕರು ನಂತರ ಮಾತನಾಡಿ ರೈತರ ಬೆಳೆಗಳನ್ನು ಸ್ಥಳೀಯವಾಗಿ ಸಂಸ್ಕರಣೆ ಮಾಡಬೇಕೆಂಬ ಉದ್ದೇಶದಿಂದ ಈ ಹಿಂದೆಯೇ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಸರ್ಕಾರ ಅನುಮೋದನೆ ನೀಡುವ ಮೂಲಕ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

        ಬಿಸ್ಲೇರಿ ಗ್ರಾಮದಲ್ಲಿ 1 ಕೋಟಿ ಮೊತ್ತದಲ್ಲಿ ಗೋದಾಮು, ಹದಡಿ ಗ್ರಾಮದಲ್ಲಿ 1 ಕೋಟಿ ಮೊತ್ತದಲ್ಲಿ ಗೋದಾಮು, ಕುಕ್ಕವಾಡ,ಗ್ರಾಮದಲ್ಲಿ 1 ಕೋಟಿ ಮೊತ್ತದಲ್ಲಿ ಗೋದಾಮು ಮತ್ತು ಸಂತೆಕಟ್ಟೆ, ತುರ್ಚಘಟ್ಟ ಗ್ರಾಮದಲ್ಲಿ 1 ಕೋಟಿ ಮೊತ್ತದಲ್ಲಿ ಗೋದಾಮು, ಬೆಳವನೂರು ಗ್ರಾಮದಲ್ಲಿ 1 ಕೋಟಿ ಮೊತ್ತದಲ್ಲಿ ಗೋದಾಮು ಮತ್ತು ಸಂತೆಕಟ್ಟೆ ನಿರ್ಮಿಸಲಾಗುವುದು. ಇದರಿಂದ ರೈತರು ಬೆಳೆದ ಬೆಳೆಗಳನ್ನು ಸ್ಥಳೀಯವಾಗಿ ಮಾರಾಟ ಮಾಡಬಹುದಲ್ಲದೇ ಬೆಳೆಗಳನ್ನು ಸಂಸ್ಕರಿಸಲು ಅನುಕೂಲವಾಗಲಿದೆ ಎಂದರು.

         ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಜಿ.ಸಿ.ನಿಂಗಪ್ಪ ಮತ್ತು ಕೆ.ಹೆಚ್.ಓಬಳೇಶಪ್ಪ ಮಾತನಾಡಿ ಶಾಮನೂರು ಶಿವಶಂಕರಪ್ಪನವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಕಳೆದ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಮತ ಬಾರದಿರುವುದು ಬೇಸರವಾಗಿದೆ ಎಂದರು.

       ಶಾಮನೂರು ಶಿವಶಂಕರಪ್ಪನವರು ಮತ ಬಾರದಿದ್ದರೂ ಸಹ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಎಲ್ಲ ಸಹಕಾರ ನೀಡುತ್ತಿದ್ದಾರೆ. ಜನತೆ ಇದನ್ನು ಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

         ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಬಿ..ಕೆಂಡಪ್ಳ ಈರಣ್ಣ, ಉಪಾಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಮಾಜಿ ಉಪಾಧ್ಯಕ್ಷರು, ಹಾಲಿ ಸದಸ್ಯರು ಆದ ಎಂ.ಬಿ.ಹಾಲಪ್ಪ, ಸದಸ್ಯರಾದ ಆರ್.ಸುಧಾ, ಕಾರ್ಯದರ್ಶಿ ಬಿ.ಆನಂದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ತುರ್ಚಘಟ್ಟದ ಬಸವರಾಜಪ್ಪ, ತಾಲ್ಲೂಕು ಪಂಚಾಯತ್ ಸದಸ್ಯರಾದ ಮಂಜಣ್ಣ, ಶ್ರೀಮತಿ ಲಕ್ಷ್ಮೀದೇವಿ ಪ್ರಕಾಶ್, ಹದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗಿರಿಜಮ್ಮ ಹಾಲಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಮಹಾಂತೇಶ್, ಶ್ರೀನಿವಾಸ್, ಮುಖಂಡರುಗಳಾದ ಮಲ್ಲೇಶಪ್ಪ, ಬಸವನಗೌಡ್ರು, ಹದಡಿ ರವಿ, ಶಿರಮಗೊಂಡನಹಳ್ಳಿ ರುದ್ರೇಶ್, ಕುಕ್ಕವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಶೋಧಮ್ಮ, ಲಿಂಗೇಶ್, ಸುರೇಶ್ ನಾಗರಸನಹಳ್ಳಿ, ಪೂರ್ಣಿಮಾ, ಸತೀಶ್, ಪಿಡಿಓ ಸುರೇಖಾ, ಲೋಕೋಪಯೋಗಿ ಇಲಾಖೆಯ ಮಹಾದೇವಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link