ಬೆಂಗಳೂರು
ವೃದ್ದ ದಂಪತಿಯ ಮನೆ ಕಳವು ಮಾಡಲು ಸುಫಾರಿ ದರೋಡೆಗೆ ಮನೆಗೆಲಸದ ಮಹಿಳೆ ಸುಪಾರಿ ನೀಡಿದ ಪ್ರಕರಣವನ್ನ ಆರ್.ಟಿ.ನಗರ ಪೊಲೀಸರು ಬೇಧಿಸಿದ್ದಾರೆ.
ನೇಪಾಳ ಮೂಲದ ಮದನ್ ಮತ್ತು ಗಣೇಶ್ ಬಂಧಿತ ಆರೋಪಿಗಳಾಗಿದ್ದಾರೆ ಕಳವಿಗೆ ಸುಫಾರಿ ನೀಡಿದ್ದ ಸುನಿತಾ ಹಾಗೂ ಆಕೆಯ ಪತಿಗಾಗಿ ಶೋಧ ನಡೆಸಿದ್ದು ಆರೋಪಿಗಳು ನೇಪಾಳಕ್ಕೆ ತೆರಳಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಆರ್‍ಟಿ ನಗರದ ಆದಿತ್ಯ ನಾರಾಯಣಸ್ವಾಮಿ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುನಿತಾ ಮತ್ತಾಕೆಯ ಪತಿ ಸುರೇಶ್ ಸೇರಿ ಸುಫಾರಿ ನೀಡಿ ದಂಪತಿಯನ್ನ ಕಟ್ಟಿ ಹಾಕಿ 6 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿಸಿದ್ದರು.
ಒಂದು ವಾರದ ಹಿಂದೆ ನಾರಾಯಣ ಸ್ವಾಮಿ ಮನೆಗೆಲಸಕ್ಕಾಗಿ ನೇಪಾಳಿ ಮೂಲದ ಸುನಿತಾ ಹಾಗೂ ಆಕೆಯ ಪತಿ ಸುರೇಶನನ್ನು ನೇಮಿಸಿದ್ದರು. ಈ ಆರೋಪಿಗಳು ಮನೆಯಲ್ಲಿ ಚಿನ್ನಾಭರಣ, ನಗದು ನೋಡಿ ಕಳ್ಳತನ ನಡೆಸಲು ಯೋಜನೆ ಮಾಡಿ ಹೊಸ ವರ್ಷದ ದಿನವೇ ತಮ್ಮ ಕೈಚಳಕ ತೋರಿಸಿದ್ದರು. ನಂತರ ಮನೆಯ ಮಾಲೀಕ ನಾರಯಣ ಸ್ವಾಮಿ ಆರ್.ಟಿ. ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ದಂಪತಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








