ಬೆಂಗಳೂರು
ದುಬೈನಲ್ಲಿ ಕೆಲಸ ಮಾಡುತ್ತಿದ್ದ ನಗರದ ಎಂಬಿಎ ಪದವೀಧರರೊಬ್ಬರು ನಾಪತ್ತೆಯಾಗಿದ್ದು ಆತಂಕಗೊಂಡಿರುವ ಪೋಷಕರು ನಗರ ಪೊಲೀಸರ ಮೊರೆ ಹೋಗಿದ್ದಾರೆ.
ಆರು ವರ್ಷಗಳ ಹಿಂದೆ ಉದ್ಯೋಗ ಅರಸಿ ದುಬೈಗೆ ಹೋಗಿದ್ದ ಪಟೆಗಾರಪಾಳ್ಯದ ಎಂಬಿಎ ಪದವೀಧರನಾಗಿದ್ದ ದೀಪಕ್ ಮಸ್ಕಟ್ನಲ್ಲಿ ಕೆಲಸ ಮಾಡುತ್ತಿದ್ದನು. ದೀಪಕ್ ಅಕ್ಕ ಪೋಲೀಯೋಗೆ ತುತ್ತಾಗಿದ್ದಾರೆ. ದೀಪಕ್ ಪ್ರತಿತಿಂಗಳೂ ಕುಟುಂಬ ನಿರ್ವಹಣೆ ಹಾಗೂ ಅಕ್ಕನ ಆರೈಕೆಗಾಗಿ ಮನೆಗೆ 50 ಸಾವಿರ ರೂಪಾಯಿ ಕಳಿಸುತ್ತಿದ್ದ.
ಕಳೆದ ಡಿ.10ರಂದು ತಾಯಿಗೆ ಫೋನ್ ಮಾಡಿದ್ದ ದೀಪಕ್ ಅಲ್ಲಿಂದ ಇಲ್ಲಿಯವರೆಗೆ ಕುಟುಂಬದವರೆಗೆ ಸಂಪರ್ಕಕ್ಕೆ ಸಿಗುತ್ತಿಲ್ಲಕಂಗಾಲಾಗಿರುವ ತಾಯಿ ಮಂಜುಳಾ ಕಣ್ಣೀರಿಡುತ್ತಿದ್ದಾರೆ. ಮಗನನ್ನು ಪತ್ತೆ ಮಾಡಿಕೊಡುವಂತೆ ಪ್ರಧಾನಿ ಕಚೇರಿ, ಧೂತವಾಸ ಕಚೇರಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಗೆ ಪತ್ರ ಬರೆದಿದ್ದಾರೆ.
ಆದರೆ ದೀಪಕ್ ಬಗ್ಗೆ ಏನೂ ಮಾಹಿತಿ ಸಿಗುತ್ತಿದ್ದರಿಂದ ಆತಂಕಗೊಂಡು ಮಂಜುಳಾ ಅವರು ನಗರ ಪೊಲೀಸರ ಮೊರೆ ಹೋಗಿದ್ದಾರೆ. ಮಗನನ್ನು ಹೇಗಾದರೂ ಹುಡುಕಿಕೊಡಿ ಎಂದು ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಬಿ.ಕೆ. ಸಿಂಗ್ ಅವರ ಬಳಿ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








