ವಿವೇಕ ಬ್ಯಾಂಡ್ ಅಭಿಯಾನದ ಕಾರ್ಯಕ್ರಮ

ಗುತ್ತಲ :

        ಭವ್ಯ ಭಾರತದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಕುಂದನಗಾರ ಹೇಳಿದರು.

          ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವೇಕ ಬ್ಯಾಂಡ್ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದರು ಭಾರತದ ಸಂಸ್ಕøತಿಯನ್ನು ಎತ್ತಿ ಹಿಡಿದಂತಹ ಮಹಾನ್ ವ್ಯಕ್ತಿ. ವಿವೇಕಾನಂದರು ತಮ್ಮ ಬಾಲ್ಯ ಜೀವನದಲ್ಲಿ ಗಂಭೀರ ಅಧ್ಯಯನದಲ್ಲಿ ತೊಡಗಿ ಭಕ್ತಿ, ವಿಚಾರವಂತಿಕೆಗಳೆನ್ನರೆಡನ್ನು ಬೆಳೆಸಿಕೊಂಡಿದ್ದರು ಅಲ್ಲದೇ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಾ ವೃತ್ತಪತ್ರಿಕೆಗಳನ್ನು ಓದುತ್ತಾ ಅರಿವನ್ನು ಪಡೆದು ಕೊಂಡಿದ್ದರು.

           ಈ ಒಂದು ವಿವೇಕ ಬ್ಯಾಂಡ್ ಅಭಿಯಾನದ ಮುಖ್ಯ ಉದ್ದೇಶ ನಮ್ಮ ಈ ಭಾರತ ದೇಶವನ್ನು ವಿಶ್ವಗುರುವನ್ನಾಗಿಸಲು ಹಾಗೂ ಸಮೃದ್ಧ ಭಾರತಕ್ಕಾಗಿ 18 ವರ್ಷದ ವಯಸ್ಕರೆಲ್ಲರು ಕಡ್ಡಾಯವಾಗಿ ಮತದಾನ ಮಾಡಿ ಇತರರಿಗೂ ಮತದಾನ ಮಾಡಲು ಪ್ರೇರೇಪಿಸುವುದರ ಜೊತೆಗೆ ಸಮೃದ್ಧ ಭಾರತಕ್ಕಾಗಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದಾಗಿದೆ. ನಂತರದಲ್ಲಿ ಕಾರ್ನಿಯಾ ಅಂಧತ್ವ ಮುಕ್ತ ಭಾರತಕ್ಕಾಗಿ ನೇತ್ರದಾನದ ಸಂಕಲ್ಪ ಮಾಡುವುದು ಹಾಗೂ ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಸ್ವದೇಶಿ ವಸ್ತುಗಳನ್ನು ಉಪಯೋಗಿಸುವಂತಹ ಮುಖ್ಯ ಧೇಯವಾಗಿದೆ ಎಂದರು.

            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಇಟ್ಟಿಗುಡಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು ಅಂತಹ ದುಶ್ಚಟಗಳಿಂದ ದೂರವಿದ್ದು ಸಮಯವನ್ನು ವಿನಾಕಾರಣೆ ವೈರ್ಥ ಮಾಡದೆ ಅಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು ಜೀವನದಲ್ಲಿ ದೇಶ ಕಂಡಂತಹ ಮಹಾನ್ ವ್ಯಕ್ತಿಗಳ ಜೀವನದ ಆದರ್ಶಗಳನ್ನು ನಮ್ಮಲ್ಲೆರ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಕಡೆ ಸಾಗಿ ಜೀವನವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯ ಬೇಕು ಅಲ್ಲದೇ ಸಮೃದ್ಧ ಭಾರತಕ್ಕಾಗಿ ನಾವೆಲ್ಲರು ಕಡ್ಡಾಯವಾಗಿ ಮತದಾನವನ್ನು ಮಾಡಿ ಇತರರನ್ನು ಪ್ರೇರೇಪಿಸೋಣ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link