ಕೊಟ್ಟೂರು
ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮಸ್ಥರು ಶುಕ್ರವಾರ ಗ್ರಾಮಪಂಚಾಯ್ತಿ ಒಳಗೆ ಕುಳಿತು ಪ್ರತಿಭಟಿಸಿದರು.
ಸುಮಾರು ಮೂವತ್ತುಕ್ಕೂ ಹೆಚ್ಚು ಜನರಿದ್ದ ಗುಂಪು ಕಳೆದ ನಾಲ್ಕು ದಿನಗಳಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಿ ಗ್ರಾಮ ಪಂಚಾಯ್ತಿಗೆ ಅಲೆದಾಡುತ್ತಿರುವುದಾಗಿ ದೂರಿದರು.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕನ್ನು ಬರಗಾಲ ಪೀಡಿತ ತಾಲೂಕೆಂದು ಸರ್ಕಾರ ಘೋಷಿಸಿದೆ. ಜನರು ಗುಳೆಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರಂತರವಾಗಿ ಉದ್ಯೋಗ ಕೊಡಿ ಎಂದು ಆದೇಶಿಸಿದೆ.
ನಾಲ್ಕು ದಿನಗಳಿಂದ ಗ್ರಾಮಪಂಚಾಯ್ತಿಗೆ ಅಲೆದಾಡಿದರೂ ಕೆಲಸ ಕೊಡುತ್ತಿಲ್ಲವೆಂದು ಆ ಗುಂಪು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿತು. ಈ ಸಂದರ್ಭದಲ್ಲಿ ಪಂಚಾಯ್ತಿ ಪಿಡಿಓ ಜಯಮ್ಮ ಕಚೇರಿ ಕೆಲಸದ ಮೇಲೆ ಕೂಡ್ಲಿಗಿಗೆ ಹೋಗಿದ್ದರು.
ಗ್ರಾಮ ಪಂಚಾಯ್ತ್ತಿಯನ್ನು ಮುತ್ತಿಗೆ ಹಾಕಿದ್ದ ಗುಂಪಿನ ಮುಖಂಡ ಜಡಿಯಪ್ಪರ ಬಸಣ್ಣ, ಕಾಡಿನಲ್ಲಿ ಸುಮಾರು 28 ಜನರು ಉದ್ಯೋಗ ಖಾತ್ರಿ ಕೆಲಸ ಮಾಡಿ 20 ದಿನವಾದರೂ ನಮ್ಮ ಖಾತೆಗೆ ಹಣ ಬಂದಿಲ್ಲ ಎಂದರು.
ಬಬ್ರುವಾಹನ(ವ್ಯಕ್ತಿಯ ಹೆಸರು) ಪತ್ರಿಕೆಯೊಂದಿಗೆ ಮಾತನಾಡಿ, ಕೆರೆಯಲ್ಲಿ 250 ಜನ ಕೆರೆಯಲ್ಲಿ ಹೂಳು ತೆಗೆದು ಎರಡು ತಿಂಗಳಾಗಿದೆ. ಇನ್ನೂ ನಮ್ಮ ಖಾತೆಗೆ ಹಣ ಸಂದಾಯವಾಗಿಲ್ಲ ಎಂದು ಹೇಳಿದರು.
ಉದ್ಯೋಗ ಖಾತ್ರಿ ಕೆಲಸವನ್ನು ಗ್ರಾಮ ಪಂಚಾಯ್ತಿ ಪಿಡಿಓ ಇಲ್ಲವೆ ಇಂಜಿನೀಯರ್ ಬಂದು ಪರಿಶೀಲಿಸುವುದೇ ಇಲ್ಲ. ಇದರಿಂದಾಗಿ ಖಾತ್ರಿ ಯೋಜನೆಯಲ್ಲಿ ಅವ್ಯವಹಾರವಾಗುವ ಸಾಧ್ಯತೆ ಇದೆ. ನಾವು ಮಾತ್ರ ಕಷುಪಟ್ಟ್ಟು ಕೆಲಸ ಮಾಡಬೇಕು ಎಂದು ಆ ಗುಂಪು ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಂಡಾಗ ಪರುಶಪ್ಪ, ಚನ್ನಬಸಪ್ಪ, ಮೂಗಪ್ಪ, ರಾಜಪ್ಪ, ಮುಪ್ಪಿನಪ್ಪ, ಕೆಂಚಪ್ಪ, ನಿಜಲಿಂಗಪ್ಪ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ