ಮಕ್ಕಳ ಹಬ್ಬ-2018

ಕೂಡ್ಲಿಗಿ:

          ಮನೆಯಲ್ಲಿಯೇ ಉತ್ತಮ ಆಹಾರ ತಯಾರಿಸುವ ಮೂಲಕ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಇಡಬಹುದು ಎಂದು ಸಾವಯವ ಕೃಷಿಕ ಎಂ. ಬಸವರಾಜ ತಾಯಂದಿರಿಗೆ ಸಲಹೆ ನೀಡಿದರು. ಅವರು ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಏರ್ಪಡಿಸಿದ್ದ ಪಂಚಾಯ್ತಿ ಮಟ್ಟದ ‘ಮಕ್ಕಳ ಹಬ್ಬ-2018’ರಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

        ಅಧುನಿಕ ಶೋಕಿಗೆ ಮಾರು ಹೋಗಿರುವ ಗ್ರಾಮೀಣ ಜನರು ಕೂಡ ತಮ್ಮ ಮಕ್ಕಳಿಗೆ ಸಿದ್ದ ಆಹಾರ ನೀಡುತ್ತಿದ್ದಾರೆ. ಇಂತಹ ಆಹಾರಗಳಿಂದ ಸಾಕಷ್ಟು ಪೌಷ್ಟಿಕತೆ ಸಿಗದೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದ್ದರಿಂದ ಮಹಿಳೆಯರು ಹುಟ್ಟಿದ ಮಕ್ಕಳಿಗೆ ಎದೆ ಹಾಲು ನೀಡಬೇಕು. ನಂತರ ಮನೆಯಲ್ಲಿ ಸಿಗುವ ಸಿರಿ ದಾನ್ಯಗಳನ್ನು ಬಳಸಿ ಉತ್ತಮ ಆಹಾರ ತಯಾರಿಸಿ ಮಕ್ಕಳಿಗೆ ನೀಡಬೇಕು. ಇದರಿಂದ ಮಕ್ಕಳು ಆರೋಗ್ಯಯುತವಾಗಿ ಬೆಳೆದು, ಲವಲವಿಕೆಯಿಂದ ಕೂಡಿ, ಮಕ್ಕಳ ಹಬ್ಬಗಳಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದರು.

          ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಮಕ್ಕಳ ಹಬ್ಬ ಉತ್ತಮ ವೇದಿಕೆಯಾಗಿದೆ. ಇಲ್ಲಿಂದಲೇ ಆರಂಭವಾಗುವ ಮಕ್ಕಳ ಚಟುವಟಿಕೆ ಜಿಲ್ಲೆ, ರಾಜ್ಯ ಮಟ್ಟದವರೆಗು ಬೆಳೆಯಲಿ ಎಂದು ಆಶಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಮ್ಮ ಮಾತನಾಡಿ, ಮಕ್ಕಳ ಸರ್ವತೋ ಮುಖ ಅಭಿವೃದ್ಧಿಗೆ ಅಂಗನವಾಡಿ ಕೇಂದ್ರಗಳು ಬುನಾದಿಯಾಗಿರುತ್ತದೆ. ಇಲ್ಲಿ ಮಕ್ಕಳ ಬೌದ್ಧಿಕತೆ ಬೆಳವಣಿಗೆ ಜೊತೆಗೆ ಪಠ್ಯತೇರ ಚಟುವಟಿಗಳಿಗೂ ಅಧ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

          ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಚ್ಚೆಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭಾಗ್ಯಮ್ಮ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಪಂಚಾಯ್ತಿ ಸದಸ್ಯರಾದ ಶಾಂತಮ್ಮ, ಮಲ್ಲಿಕಾರ್ಜುನ, ಬಾಲಪ್ಪ, ಬಸವರಾಜ, ಶರಣಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಗೌರಮ್ಮ, ಜಯಶ್ರೀ, ಸಾವಿತ್ರಮ್ಮ, ವಿಜಯಲಕ್ಷ್ಮಿ, ಗಂಗಮ್ಮ, ಶೈಲಾಜ, ಶಕುಂತಲಮ್ಮ ವೇದಿಕೆಯಲ್ಲಿದ್ದರು. ಗ್ರಾಮದ ಮುಖಂಡರು ಹಾಗೂ ಪೋಷಕರು ಸಭೆಯಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿವಿಧ ವೇಷ ಭೂಷಣ ದರಿಸಿದ್ದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link