ಮಹಾಘಟಬಂಧನ ದುರುದ್ಧೇಶದಿಂದ ಕೂಡಿದೆ:ಬಿ.ಜೆ.ಪುಟ್ಟಸ್ವಾಮಿ

ಹಾವೇರಿ:

         ದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ ಮೂಲಕ ಒಂದಾಗಿರುವದು ದುರುದ್ಧೇಶದಿಂದ ಕೂಡಿದೆ ಎಂದು ಬಿಜೆಪಿ ಪಕ್ಷದ ಹಿಂದುಳಿದ ಘಟಕ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿರು.

        ಮಹಾಘಟಬಂಧನ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಭದ್ರತೆ ಬಗ್ಗೆ ಯಾವುದೇ ಪರಿಜ್ಞಾನ ಹೊಂದಿಲ್ಲ. ಪ್ರಧಾನಿ ಮೋದಿ ಬಗ್ಗೆ ಇರುವ ಅಸೂಹೆ ಭಾವನೆಯಿಂದ ಪ್ರಾದೇಶಿಕ ಪಕ್ಷಗಳ ಮುಖಂಡರು ಒಂದಾಗಿದ್ದಾರೆ. ಮೋದಿ ಮತ್ತೋಮೆ ಪ್ರಧಾನಿಯಾದರೆ, ದೇಶದಲ್ಲಿ ಒಂದಾಗಿರುವ ಮಹಾಘಟಬಂಧನ ನಾಯಕರು ರಾಜಕೀಯವಾಗಿ ನಾಶವಾಗಲಿದ್ದಾರೆ. ಮೋದಿಯನ್ನು ಸೋಲಿಸಲು ಒಂದಾಗಿರುವ ವಿರೋಧಿಗಳಲ್ಲಿ ಯಾರು ಸಹ ಮೋದಿಗೆ ಸಮನಾದ ನಾಯಕರಿಲ್ಲ ಎಂದು ತಿಳಿಸಿದರು.

         ಈ ಬಾರಿ ನಡೆಯುವ ಲೋಕಸಭಾ ಚುನಾವಣೆ ಬಿಜೆಪಿಗೆ ಬಹಳ ಮಹತ್ವದ್ದಾಗಿದೆ. ಮೋದಿ ಮತ್ತೋಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ಪುನಃ ಮೋದಿ ಪ್ರಧಾನಿಯಾದರೆ ದೇಶ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮೋದಿ ಜನಪ್ರೀಯತೆಯನ್ನು ಸಹಿಸದ ನಾಯಕರು ಅವರ ವಿರುದ್ಧ ಚುನಾವಣೆಗಾಗಿ, ಅಧಿಕಾರಕ್ಕಾಗಿ ಒಂದಾಗಿದ್ದಾರೆ ಎಂದು ದೂರಿದರು.

          ಮೋದಿಯನ್ನು ವಿದೇಶಿ ನಾಯಕರು ಮೆಚ್ಚಿಕೊಂಡಿದ್ದರು, ಮಹಾಘಟಬಂಧನ ನಾಯಕರಿಗೆ ಮೋದಿ ವ್ಯಕ್ತಿತ್ವ ಅರ್ಥವಾಗಿಲ್ಲ. ಮೋದಿಯ ಮೇಲಿನ ಸಂಕುಚಿತ ಭಾವನೆಯಿಂದ ವಿಚಾರಗಳು, ಅಭಿಪ್ರಾಯಗಳು, ಸಿದ್ಧಾಂತಗಳು ಬೇರೆಯಾಗಿರುವ ಪ್ರಾದೇಶಿಕ ಪಕ್ಷಗಳ ಒಂದಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಆದರೆ, ದೇಶದ ಜನರಿಗೆ ಇವರ ಒಂದಾಗುವಿಕೆಕ್ಕಿಂತ ದೇಶದ ಹಿತ ಮುಖ್ಯವಾಗಿದೆ. ಅವರಿಗೆ ಅಭಿವೃದ್ಧಿ ಬೇಕಾಗಿದೆ. ಸುಭದ್ರ ರಾಷ್ಟ್ರ ನಿರ್ಮಾಣ ಮಾಡಬೇಕಾಗಿದೆ ಈ ಕಾರಣದಿಂದ ಈ ಬಾರಿ ಚುನಾವಣೆಯಲ್ಲಿ ಜನರ ಮತ್ತೆ ಬಿಜೆಪಿ ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

         ಇನ್ನು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ನಾಯಕರಲ್ಲಿ ಹೊಂದಾಣಿಕೆ ಕೊರತೆಯಿದೆ. ಈ ಕಾರಣದಿಂದ ಸರಕಾರ ನಡೆಸುವದು ಮುಖ್ಯಮಂತ್ರಿಗಳು ಕಷ್ಟವಾಗುತ್ತಿದೆ. ಸರಕಾರದಲ್ಲಿ ಆರ್ಥಿಕ ಸಂಪನ್ಮೂಲವಿಲ್ಲ. ಈ ಕಾರಣದಿಂದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರೆಯುತ್ತಿಲ್ಲ. ಸಧ್ಯದ ಸರಕಾರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸರಕಾರ ಯಾವಾಗ ಬೇಕಾದ ಪತನವಾಗಬಹುದು ಎಂದು ಭವಿಷ್ಯ ನುಡಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಯು.ಬಿ.ಬಣಕಾರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನರ, ಮುಖಂಡರಾದ ಮಾ. ನಾಗರಾಜ ಬೋಜರಾಜ ಕರೂದಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link