ಮೈಸೂರು:
ಕಾಡುಜನರ ಒತ್ತಾಯಕ್ಕೆ ಮಣಿದು ಇಲ್ಲಿಯವರೆಗು ಮೂರು ಜನರನ್ನು ಬಲಿ ಪಡೆದಿರುವ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಸುಮಾರು 30 ಮಂದಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ “ಅಪರೇಷನ್ ನರಭಕ್ಷಕ” ವನ್ನು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯ ಸಿಸಿಎಫ್ ನಾರಾಯಣಸ್ವಾಮಿ ನೇತೃತ್ವದಲ್ಲಿ ಆಪರೇಷನ್ ನರಭಕ್ಷಕ ಚುರುಕಾಗಿ ನಡೆಯುತ್ತಿದ್ದು. 3 ಮಂದಿ ಆದಿವಾಸಿಗಳ ಬಲಿ ಪಡೆದಿರುವ ಹುಲಿಯನ್ನು ಸೆರೆ ಹಿಡಿಯಲು ಸುಮಾರು 30 ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಮಾನಿಮೂಲೆ ಹಾಡಿಯ ಜೆಡಿಯಾ, ಕಳೆದ ವಾರದ ಹುಲ್ಲುಮಟ್ಲು ಗ್ರಾಮದ ಚಿನ್ನಪ್ಪ ಹಾಗೂ ನಿನ್ನೆ ಹೊಸತಿಪ್ಪೂರಿನ ಕಡ್ಡಿ ಎಂಬ ಮೂವರನ್ನು ಹುಲಿ ಸಾಯಿಸಿದೆ ಎಂದು ತಿಳಿದು ಬಂದಿದೆ. ಈ ಕಾರಣಗಳಿಂದ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಚುರುಕಾಗಿ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯನ್ನು ಸೆರೆಹಿಡಿಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ