ದೆಹಲಿ :
ತಾಜ್ ಮಹಲ್ ನಲ್ಲಿ ಕಾಲಕಳೆಯಲು ಕೇವಲ 3 ಗಂಟೆ ಮಾತ್ರ ಅವಕಾಶ ನೀಡಲಾಗಿದ್ದು, 3 ಗಂಟೆಗಿಂತ ಹೆಚ್ಚಿನ ಅವಧಿ ಕಳೆದರೆ ದಂಡ ವಿಧಿಸಲಾಗುತ್ತದೆಯಂತೆ
ಹೌದು, ಪ್ರೇಮದ ಸಂಕೇತವಾದ ತಾಜ್ ಮಹಲ್ ಅನ್ನು ನೋಡಬೇಕೆಂಬುದು ಪ್ರತಿಯೊಬ್ಬರ ಆಸೆ. ಆದರೆ, ತಾಜ್ ಮಹಲ್ ಪ್ರವೇಶಕ್ಕೆ ಸಮಯವನ್ನು ನಿಗದಿಪಡಿಸಲಾಗಿದ್ದು, ತಾಜ್ ಮಹಲ್ ಪ್ರವೇಶ ಮಾಡಿದ 3 ಗಂಟೆಯೊಳಗೆ ಅಲ್ಲಿಂದ ಹೊರಗೆ ಹೋಗಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ.
ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಹೊಸ ನಿಯಮದ ಆದೇಶ ಹೊರಡಿಸಿದ್ದು, ತಾಜ್ ಮಹಲ್ ಗೆ ಅನಧಿಕೃತ ಪ್ರವೇಶವನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ನಿಯಮವನ್ನು ಜಾರಿಗೆ ತಂದಿರುವುದಾಗಿ ಇಲಾಖೆ ಸ್ಪಷ್ಟನೆ ನೀಡಿದೆ.
ಹೊಸ ವ್ಯವಸ್ಥೆಯ ಪ್ರಕಾರ, ಟಿಕೆಟ್ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರಿಗೆ ತಾಜ್ ಮಹಲ್ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಶೀಘ್ರದಲ್ಲೇ ಕಾಂತೀಯ ನಾಣ್ಯ (ನಾಣ್ಯ)ವನ್ನು ಬಳಸಿ ತಾಜ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ನಾಣ್ಯ ಬಳಸಿ ತಾಜ್ ಮಹಲ್ ಪ್ರವೇಶಿಸುವ ಪ್ರವಾಸಿಗಳು ಕೇವಲ ಮೂರು ಗಂಟೆಗಳು ಮಾತ್ರ ತಾಜ್ ಮಹಲ್ ಒಳಗೆ ಇರಲು ಅವಕಾಶವಿದೆ.
ಒಂದುವೇಳೆ ಪ್ರವಾಸಿಗರು 3 ಗಂಟೆಗಿಂತ ಅಧಿಕ ಸಮಯವನ್ನು ತಾಜ್ ಮಹಲ್ ನಲ್ಲಿ ಕಳೆಯಬೇಕೆಂದಿದ್ದರೆ ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಪ್ರವಾಸಿಗರಿಗೆ ನೀಡಲಾದ ನಾಣ್ಯವನ್ನು ಪುನಃ ರಿಚಾರ್ಜ್ ಮಾಡಬೇಕಾಗುತ್ತದೆ.
ಹೊಸ ನಿಯಮಕ್ಕೆ ಪ್ರವಾಸಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇದು ನಿಜಕ್ಕೂ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ