ಹಾವೇರಿ :
ರೈತರಿಗೆ, ಅಸಂಘಟಿತ ಕಾರ್ಮಿಕರಿಗೆ, ಮದ್ಯಮ ವರ್ಗದವರಿಗೆ ಕೈಗಾರಿಕಾ ಉದ್ದಿಮೆಗಳಿಗೆ, ರಕ್ಷಣಾ ವಲಯಕ್ಕೆ, ಮಹಿಳೆಯರಿಗೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ, ರಸ್ತೆ ಅಭಿವೃದ್ಧಿಗೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ತಲುಪಿಸುವದರ ಮೂಲಕ ಕೇಂದ್ರ ಸರ್ಕಾರ ತೆರೆಗೆ ಆದಾಯದ ಲಾಭವನ್ನು ಜನ ಕಲ್ಯಾಣಕ್ಕಾಗಿ ಮೀಸಲಿಡುವ ಮೂಲಕ ಜನರಿಂದ ಆಯ್ಕೆಯಾದ ಸರ್ಕಾರ, ಜನರಿಗಾಗಿ ಎಂದು ಕೇಂದ್ರ ಸರ್ಕಾರ ಈ ಸಾಲಿನ ಮದ್ಯಂತರ ಮುಂಗಡ ಪತ್ರ ಮಂಡಣೆ ಮಾಡುವ ಮೂಲಕ ಪಾರದರ್ಶಕತೆ ಪ್ರದರ್ಶಿಸಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಶೇಕಡಾ 2 ರಷ್ಟು ಬಡ್ಡಿ ವಿನಾಯ್ತಿ ಘೋಷಿಸುವ ಮೂಲಕ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ ಮತ್ತು ದೇಶದ ರಕ್ಷಣಾ ವಲಯದ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂ ಹಣ ಮೀಸಲಿಡುವ ಮೂಲಕ ದೇಶದ ರಕ್ಷಣೆಗೆ ಒತ್ತು ನೀಡಿದ್ದಾರೆ. ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ 75 ಸಾವಿರ ಕೋಟಿ ರೂ ಪರಿಶಿಷ್ಟ .ಪಂಗಡ ಕಲ್ಯಾಣಕ್ಕಾಗಿ 50 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಹಾಗೂ ಅಲೇಮಾರಿ ಸಮುದಾಯ ನಿಗಮ ಸ್ಥಾಪಿಸುವ ಮೂಲಕ ಅಲೇಮಾರಿ ಜನಾಂಗದ ಅಭಿವೃದ್ಧಿಗೆ ಮತ್ತು ರಾಷ್ಟ್ರೀಯ ಕಾಮಧೇನು ಯೋಜನೆ ಅಡಿ ಗೋ ತಳಿಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ.
ಮೀನುಗಾರ ಸಮುದಾಯದ ಪ್ರತ್ಯೇಕ ನಿಗಮ ಸ್ಥಾಪಿಸುವ ಮೂಲಕ ದೀನದಲಿತರ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನದಲ್ಲಿ ಶೇ 50 ರಷ್ಟು ಹೆಚ್ಚಳ ಮಾಡುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಒತ್ತು ಕೊಟ್ಟಿದ್ದಾರೆ.ಈ ಸಾಲಿನ ಬಜೆಟ್‍ದಲ್ಲಿ ಮಧ್ಯಮ ವರ್ಗದ ಬಹುದಿನದ ಬೇಡಿಕೆಯಾದ ಆದಾಯ ತೆರಿಗೆ ಮೀತಿಯನ್ನು 2.5 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸುವ ಮೂಲಕ ಆದಾಯ ತೆರೆಗೆ ಮಿತಿಯನ್ನು ಹೆಚ್ಚಿಸಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ 19 ಸಾವಿರ ಕೋಟಿ ಮೀಸಲಿಡುವ ಮೂಲಕ ಕಳೆದ ಸಾಲಿಗಿಂತ 3 ಪಟ್ಟು ಹೆಚ್ಚಿಸಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮತ್ತು ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 60 ಸಾವಿರ ಕೋಟಿ ಮೀಸಲಿಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಪಿಯೂಷ್ ಗೋಯಲ್ ರವರನ್ನು ಅಭಿನಂದಿಸುವ ಮೂಲಕ ಮುಂಗಡ ಪತ್ರ ಸ್ವಾಗತಿಸುವುದಾಗಿ ಸಂಸದರಾದ ಶಿವಕುಮಾರ ಉದಾಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ಸಂಸದರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.