ವೈಷಮ್ಯ ಹರಡುವುದು ಅಪರಾಧ-ಗೃಹ ಇಲಾಖೆಯ ಎಚ್ಚರಿಕೆ

ಬಳ್ಳಾರಿ

          ಸಾಮಾಜಿಕ ಜಾಲತಾಣಗಳಲ್ಲಿ ಹಂಪಿಯ ಬಗ್ಗೆ ವೈರಲ್ ಆಗಿರುವ ವೀಡಿಯೋ ತನಿಖೆ ಮಾಡಲಾಗಿ, ಆ ವೀಡಿಯೋ ಮತ್ತು ಘಟನೆಯು ಸುಮಾರು ವರ್ಷಗಳ ಹಳೆಯದಾಗಿರುವುದು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ರವರ ದೂರಿನಿಂದ ಕಂಡುಬಂದಿರುತ್ತದೆ.

           ಮತ್ತೆ ಪೊಲೀಸರು ತಂಡಗಳನ್ನು ಮಾಡಿ ಆ ವೀಡಿಯೋದಲ್ಲಿ ಬಂದಿರುವ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಿ ವೀಡಿಯೋದಲ್ಲಿರುವ 3 ಜನ ಯುವಕರು ಮತ್ತು ವೀಡಿಯೋ ತೆಗೆದಿರುವ ಒಬ್ಬ ಯುವಕ ಒಟ್ಟು 4 ಜನ ಎಗ್ಸೈಟ್‍ಮೆಂಟ್‍ನಿಂದ ಟೂರಿಸ್ಟ್ ಯುವಕರು ಮಾಡಿರುವ ಈ ಘಟನೆ ಪತ್ತೆಯಾಗುತ್ತಿರುತ್ತದೆ.

           ಇದರಲ್ಲಿ ಕೆಲವೊಂದು ರಾಜಕೀಯ ಮತ್ತು ಧಾರ್ಮಿಕ ಗುಂಪುಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಒಂದು ವರ್ಷದ ಈ ಹಳೆಯ ವೀಡಿಯೋವನ್ನು ತಾತ್ಕಾಲಿಕ ಮತ್ತು ಭವಿಷ್ಯದ ಪ್ರಯೋಜನೆಗಾಗಿ ಉಪಯೋಗಿಸಿಕೊಂಡಿರುವುದು ಕಂಡುಬಂದಿರುತ್ತದೆ. ತಮ್ಮ ಸ್ವಾರ್ಥಕ್ಕಾಗಿ ದೇಶದ ಯಾವುದೇ ಪ್ರಜೆಗಳ ಮೇಲೆ ವೈಷಮ್ಯವನ್ನು ಸೃಷ್ಠಿ ಮಾಡುವುದು ಗಂಭೀರ ಅಪರಾಧವಾಗಿರುತ್ತದೆ. ಅಂತಹ ಅಪರಾಧಗಳನ್ನು ಮಾಡುವವರನ್ನು ಕೂಡ ಕಠಿಣ ಶಿಕ್ಷೆ ಕೈಗೊಳ್ಳಲಾಗುವುದೆಂದು ತಿಳಿಯಪಡಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link