ಕೊಟ್ಟೂರು
ಪಟ್ಟಣದ ನಾಲ್ಕುನೇ ವಾರ್ಡನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಎರಡು ವರ್ಷವಾದರೂ ಈ ವಾರ್ಡ ಜನರಿಗೆ ಸಿಹಿ ನೀರು ಕುಡಿಯುವ ಯೋಗ ಕೂಡಿಬಂದಿಲ್ಲ.
ಸಿಮೆಂಟ್ ಕಟ್ಟೆ ಕಟ್ಟಿ, ಅದರ ಮೇಲೆ ಶುದ್ದ ಕುಡಿಯುವ ನೀರಿನ ಶೆಡ್ ನಿರ್ಮಿಸಿದ್ದಾರೆ. ಅದರೊಳಗೆ ನೀರನ್ನು ಶುದ್ದಗೊಳಿಸುವ ಯಂತ್ರಗಳಿಲ್ಲ. ಅದು ಖಾಲಿ ಶೆಡ್.
ಕಳೆದ ಎರಡು ವರ್ಷಗಳಿಂದಲೂ ಶುದ್ದ ಕುಡಿಯುವ ನೀರಿನ ಘಟಕದ ಶೆಡ್ ಹಾಗೆ ನಿಂತ್ತಿದೆ. ವಾರ್ಡ ಜನರು ನಮ್ಮ ವಾರ್ಡನಲ್ಲಿ ಶುದ್ದ ಕುಡಿಯುವ ನೀರನ ಘಟನ ಸ್ಥಾಪನೆಯಾಗಿದೆ. ಶುದ್ದವಾದ ಕುಡಿಯುವ ನೀರು ಕುಡಿಯಬಹುದು ಎಂದು ಆಸೆ ಕಣ್ಣುಗಳಿಂದ ನೋಡುತ್ತಿದ್ದಾರೆ.
ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರನ ಸಮಸ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಈ ಶುದ್ದ ಕುಡಿಯುವ ನೀರಿನ ಶೆಡ್ ನಿರ್ಮಿಸಿ ಯಂತ್ರಗಳನ್ನು ಅಳವಡಿಸದಿರುವುದರ ಕಾರಣ ಅರ್ಥವಾಗುತ್ತಿಲ್ಲ.
ಈ ವಾರ್ಡನ ಜನರು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೂ ಸಿಹಿ ನೀರು ಕುಡಿಯುವ ಭಾಗ್ಯ ಇಲ್ಲಿನ ಜನರಿಗೆ ಸಿಕ್ಕಿಲ್ಲ. ಸಿಹಿ ನೀರನ್ನು ಬೇರೆ ವಾರ್ಡಗಳಿಂದ ತಂದು ಕುಡಿಯಬೇಕು.ಫೆ. 28ರಂದು ಕೊಟ್ಟೂರೇಶ್ವರ ಸ್ವಾಮಿ ಜಾತ್ರೆ ಇರುವುದರಿಂದ ಈ ವಾರ್ಡನಲ್ಲಿ ಕುಡಿಯುವ ನೀರನ ಸಮಸ್ಯೆ ಅಧಿಕವಾಗಲಿದೆ.