ಕೊಟ್ಟೂರು
ಕೊಟ್ಟೂರು ಸಮೀಪದ ಹ್ಯಾಳ್ಯಾ ಗ್ರಾಮದಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದ್ದರೂ ದಿನವೂ ಇದೇ ಟ್ಯಾಂಕ್ ನಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಸರ್ಕಾರಿ ಪ್ರೌಢ ಶಾಲೆಗೆ ಮೂರುನಾಲ್ಕು ಅಡಿ ದೂರದಲ್ಲಿ ಈ ಶಿಥಿಲಗೊಂಡ ಟ್ಯಾಂಕ್ಇದೆ. ಸುತ್ತಲ ಮನೆಗಳಿವೆ. 30 ವರ್ಷದ ಹಿಂದೆ ನಿರ್ಮಿಸಿದ ಈ ಟ್ಯಾಂಕ್ ಆಕಸ್ಮಿಕವಾಗಿ ಬಿದ್ದು ಬಿಟ್ಟರೆ ಆ ಅನಾಹುತವನ್ನು ಊಹಿಸಿಕೊಳ್ಳುವುದಕ್ಕೆ ಭಯವಾಗುತ್ತದೆ.ಶಿಥಿಲಗೊಂಡ ಟ್ಯಾಂಕ್ನ್ನು ತೆರವುಗೊಳಿಸಬೇಕೆಂದು ಹ್ಯಾಳ್ಯಾ ಗ್ರಾಮಸ್ಥರು ಜಿಲ್ಲಾ ಪಂಚಾಯ್ತಿ ಇಲಾಖೆಗೆ ಹಲವು ಸಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಶನಿವಾರ ಪತ್ರಿಕೆಗೆ ತಿಳಿಸಿದರು.
ಹ್ಯಾಳ್ಯಾ ಗ್ರಾಮಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲು ಬೇರೆ ನೀರಿನ ಟ್ಯಾಂಕ್ ಇಲ್ಲದ ಕಾರಣ ಇದೇ ಶಿಥಿಲಗೊಂಡ ಟ್ಯಾಂಕ್ನಿಂದಲೇ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.ವಿಷಯ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ ನಾಯ್ಕ, ಸ್ಥಳಕ್ಕೆ ಆಗಮಿಸಿ ಶಿಥಿಲಗೊಂಡ ಟ್ಯಾಂಕನ್ನು ನೋಡಿ ಟ್ಯಾಂಕ್ ಇಷ್ಟು ಶಿಥಿಲಗೊಂಡರೂ ಇಲಾಖೆಯವರು ಇದನ್ನು ತೆರವುಗೊಳಿಸದಿರುವ ಬಗ್ಗೆ ಅಲ್ಲಿಂದಲೇ ತರಾಟೆ ತೆಗೆದುಕೊಂಡರು.ತಾಲೂಕು ಪಂಚಾಯ್ತಿ ಸಭೆಯಲ್ಲಿ ಈ ವಿಷಯ ಕುರಿತು ಚರ್ಚೆ ಮಾಡಿ ಖಂಡಿತ ಶಿಥಿಲಗೊಂಡ ಟ್ಯಾಂಕ್ನ್ನು ತೆರವುಗೊಳಿಸಿ ನೂತನ ಟ್ಯಾಂಕ್ ನಿರ್ಮಿಸುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದರು.ಟ್ಯಾಂಕ್ನ ಕಂಬಗಳು ಶಿಥಿಲಗೊಂಡಿವೆ. ಗ್ರಾಮಸ್ಥರು ಇಲಾಖೆಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ನಮ್ಮ ಕರ್ನಾಟಕ ರಕ್ಷಣ ವೇದಿಕೆ ಮಹಾಂತೇಶ ಮುಷ್ಕರ ಮಾಡುವುದಾಗಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ವೆಂಕಟೇಶ ನಾಯ್ಕಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹ್ಯಾಳ್ಯಾ ಪಂಚಾಯ್ತಿ ಪಿಡಿಓ ಪ್ರೀತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕೊಟ್ರೇಶ, ಕಾಟಿ ಹನುಮಂತಪ್ಪ, ಉತ್ತಂಗಿ ಗೋಣೇಶ, ಎ. ರಮೇಶ, ಟಿ. ಪ್ರಕಾಶ, ದೊಡ್ಡಜ್ಜರ ಹನುಮಂತಪ್ಪ ಮುಂತಾದ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ