ಜಮೀನು ವಿವಾದ : ತಂದೆ ಮಗನ ಕೊಲೆ…!!!

ಬೆಂಗಳೂರು

       ಜಮೀನು ವಿವಾದದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನು ಮಚ್ಚಿನಿಂದ ಕೊಚ್ಚಿ ಜೋಡಿ ಕೊಲೆ ಮಾಡಿದ ಆರೋಪಿಯ ಹೊಸಕೋಟೆಯ ಅನುಗೊಂಡನಹಳ್ಳಿ ಪೊಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.ಮೃತರನ್ನು ನಾರಾಯಣರೆಡ್ಡಿ(60) ಮತ್ತವರ ಪುತ್ರ ಲಿಂಗಾರೆಡ್ಡಿ(32) ಎಂದು ಗುರುತಿಸಲಾಗಿದೆ.ಕೃತ್ಯವೆಸಗಿ ಠಾಣೆಗೆ ಬಂದು ಶರಣಾದ ಆರೋಪಿ ಬಾಬುನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

        ಕಳೆದ ಮೂವತ್ತು ವರ್ಷಗಳ ಹಿಂದೆ ಕೊಲೆಯಾದ ನಾರಾಯಣರೆಡ್ಡಿ ಆರೋಪಿ ಬಾಬು(35)ಗೆ ಮುತ್ತಕದಹಳ್ಳಿಯ ಸರ್ವೆ ನಂ.18 ರಲ್ಲಿ 2 ಎಕರೆ ಜಮೀನು ಮಾರಿದ್ದರು. ಆದರೆ ಅದನ್ನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಅಂದಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಕಳೆದ 15ವರ್ಷಗಳಿಂದಲೂ ಜಮೀನು ವಿವಾದದ ಕುರಿತಾಗಿ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

        ವಿಚಾರಣೆ ಮುಗಿದು ತೀರ್ಪು ಹೊರಬರದಿದ್ದರಿಂದ ಆಕ್ರೋಶಗೊಂಡ ಬಾಬು ಸೋಮವಾರ ಸಂಜೆ ನಾರಾಯಣರೆಡ್ಡಿ ಹಾಗೂ ಆತನ ಮಗ ಲಿಂಗಾರೆಡ್ಡಿ ಜಮೀನಿನಲ್ಲಿ ನೀಲಿಗಿರಿ ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದಾಗ ಏಕಾಏಕಿ ಬಂದು ಜಗಳ ಮಾಡಿ ಕುರಿ ಕಡಿಯುವ ಮಚ್ಚಿನಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

        ಶರಣಾದ ಆರೋಪಿಯಿಂದ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಕೊಲೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link