ಬಳ್ಳಾರಿ
ಬಳ್ಳಾರಿ ನಗರದಲ್ಲಿರುವ ಶ್ರೀಕನಕ ದುರ್ಗ ದೇವಸ್ಥಾನದ ಆವರಣದಲ್ಲಿ ನೆಲಹಾಸು ಕಾಮಗಾರಿಗೆ ಮುಜರಾಯಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಪಿ.ಟಿ.ಪರಮೇಶ್ವರ ನಾಯಕ್ ಅವರು ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇವಸ್ಥಾನದ ಅಭಿವೃದ್ಧಿಯ ಕಾಮಗಾರಿ ಹಾಗೂ ದೇವಸ್ಥಾನದ ಆಡಳಿತದಲ್ಲಿ ಲೋಪದೋಷಗಳು ಕೇಳಿ ಬರುತ್ತಿದ್ದು, ಇದನ್ನು ಸರಿದೂಗಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ, ಶೀಘ್ರವೇ ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಬೆಣಕಲ್ಲು ಬಸವರಾಜ, ದೇವಸ್ಥಾನದ ಆಡಳಿತಾಧಿಕಾರಿ ಪಿ.ಗಾದೆಪ್ಪ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.