ಮಹಿಳಾ ಹಾಸ್ಟೆಲ್ ಕಟ್ಟಡಕ್ಕೆ ಭೂಮಿ ಪೂಜೆ

ಹಿರಿಯೂರು :

       ಇಂದು ರಾಜ್ಯದಲ್ಲಿ ಐ.ಟಿ.ಐ ಮತ್ತು ಪಾಲಿಟಕ್ನಿಕ್ ಡಿಪ್ಲೊಮಾ ಕೋರ್ಸಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ನಗರಕ್ಕೆ ಎಂಜಿನಿಯರಿಂಗ್ ಕಾಲೇಜಿನ ಅಗತ್ಯವಿದೆ. ಪ್ರಸ್ತುತ ಇರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದಾಗಿ ಶಾಸಕಿ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.

       ನಗರದ ಬೈಪಾಸ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಪಾಲಿಟ್ಕ್ನಿಕ್ ಕಾಲೇಜಿನ ವಿದ್ಯಾರ್ಥಿನಿಯರಿಗೆ 2ಕೋಟಿ ವೆಚ್ಚದ ಹಾಸ್ಟೆಲ್ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಭೂಮಿ ಪೂಜೆ ಮಾಡಿರುವ ಮಹಿಳಾ ಹಾಸ್ಟೆಲ್ ಕಟ್ಟಡ ಪೂರ್ಣಗೊಳಿಸಲು 18 ತಿಂಗಳು ಬೇಕಿದ್ದು, ಗುತ್ತಿಗೆದಾರರು 12 ತಿಂಗಳ ಒಳಗೆ ಮುಗಿಸುವ ಭರವಸೆ ನೀಡಿದ್ದಾರೆ ಎಂದರು.

ಪ್ರಾಂಶುಪಾಲ ಯು.ವಿ. ಗೋವೇಕರ್ ಮಾತನಾಡಿ, ಕಾಲೇಜಿಗೆ ಬೇಕಿರುವ ಪ್ರಯೋಗಾಲಯ ಸೇರಿ ಇತರೆ ಸೌಲಭ್ಯಗಳಿಗೆ ಕನಿಷ್ಟ ಒಂದು ಎಕರೆ ಜಾಗ ಬೇಕಿದೆ. ಇಲ್ಲಿನ ಹೊಸಕಟ್ಟಡದಲ್ಲಿ ಸೆಪ್ಟಂಬರ್ ತಿಂಗಳಿನಿಂದ ಬೋಧನೆ ಆರಂಭಿಸಿದೆ. ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಕಾಲೇಜಿನಲ್ಲಿ ಸಿವಿಲ್, ಮೆಕಾನಿಕಲ್, ಕಂಪ್ಯೂಟರ್‍ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಕೋರ್ಸ್‍ಗಳಿವೆ. 600ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಈ ಕಾಲೇಜಿಗೆ ಸರ್ಕಾರಿ ಬಸ್‍ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

         ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಒಬಿಸಿ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಯಶವಂತರಾಜು, ಮಲ್ಲಿಕ್‍ಸಾಬ್, ಪಾಂಡು, ಟಿ.ಚಂದ್ರಶೇಖರ್, ಆರ್.ಟಿ.ಬಸವರಾಜು, ಕಬಡ್ಡಿ ಶ್ರೀನಿವಾಸ್, ಹರೀಶ್, ಸೋಮನಾಥ್, ಕಾಲೇಜಿನ ಹಿರಿಯ ಉಪನ್ಯಾಸಕರಾದ ವಾಸುದೇವ್, ಚಂದ್ರಶೇಖರ್, ಗಂಗಾಧರ್, ಶಿವಯೋಗಿ, ಶಿವರಾಜ್, ಹರೀಶ್, ಶಶಿಧರ್, ಮೇರಿ, ಶ್ವೇತಾ, ಸುಷ್ಮಾ, ಚೇತನಾ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link