ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮ

ಬಾಡಗಿ:

      12ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತಿಯತೆ, ಮೇಲು-ಕೀಳು, ತಾರತಮ್ಯ, ಅಸ್ಪ್ರುಶ್ಯತೆ, ಮೂಡ ನಂಬಿಕೆಗಳ ವಿರುದ್ದ ದ್ವನಿ ಏತ್ತಿದವರಲ್ಲಿ ಮಡಿವಾಳ ಮಾಚಿದೇವರು ಕೂಡಾ ಪ್ರಮುಖರು ಎಂದು ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಹೇಳಿದರು.
ಪಟ್ಟಣದ ತಹಶಿಲ್ದಾರ ಕಛೇರಿಯಲ್ಲಿ ತಾಲೂಕಾಡಳಿತ ಎರ್ಪಡಿಸಿದ್ದ ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

       ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಬಡವರು, ದೀನದಲಿತರು, ಮಹಿಳೆಯರು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ ಮಾಚಿದೇವ ಅತ್ಯಂತ ಪ್ರಕಾಶಮಾಣವಾಗಿ ಕಂಡುಬಂದರು. ಇವರ ಆದರ್ಶ ಗುಣಗಳನ್ನು ಪರಿಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

       ಸಮಾಜದ ಮುಖಂಡ ಸಂಜೀವ ಮಡಿವಾಳ ಮಾತನಾಡಿ, ಮಾಚಯ್ಯ ಹುಟ್ಟಿದಾಗಿನಿಂದಲೂ ಮಡಿವಾಳನಾಗಿದ್ದು, ಅಚಲ ಕಾಯಕ ನಿಷ್ಠನಾಗಿದ್ದ. ಹಿಮಾಲಯದಷ್ಟು ದೃಡನಾಗಿದ್ದ. ತನ್ನ ಕಾಯಕವೆ ಭಕ್ತಿ, ಜೀವನದುಸಿರು ಎಂದು ನಂಬಿದ್ದ. ಮಾಚಿದೇವರು 12 ನೇ ಶತಮಾನದಲ್ಲಿ ಕ್ರಾಂತಿ ಮಾಡುವುದರೊಂದಿಗೆ ಹಿಂದೂಳಿದ ಸಮಾಜಕ್ಕೆ ಗೌರವ ನೀಡುವ ಮನೋಬಾವನೆ ಬೆಳೆಸಿದರು. ನಮ್ಮ ಸಮಾಜ ಅತಿ ಹಿಂದೂಳಿದ ಸಮಾಜವಾಗಿದೆ.

         ಸಮಾಜದವರು ಜಾಗೃತರಾಗಬೇಕು. ಸಮಾಜದಲ್ಲಿ ಸಾದನೆಗೈದ ಮುಖಂಡರು ಹಲವರು ಇದ್ದಾರೆ ಅವರನ್ನು ಗುರುತಿಸುವ ಪ್ರಯತ್ನವಾಗಬೇಕಿದೆ ಎಂದರು. ಅಲ್ಲದೆ ಮಡಿವಾಳ ಸಮಾಜವನ್ನು ಎಸ್‍ಸಿಗೆ ಸೇರಿಸಬೇಕು. ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಸಭಾಭವನವನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿದರು.

        ಜಿಪಂ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತನಾಡಿ, ಮಡಿವಾಳ ಸಮಾಜ ಭಾಂದವರು ಆರ್ಥಿಕವಾಗಿ ಹಿಂದೂಳಿದಿದ್ದಾರೆ. ಸರ್ಕಾರವು ಕೂಡ ಅವರ ಏಳ್ಗೆಗಾಗಿ ವಿಶೇಷ ಅನುದಾನ ನೀಡಬೇಕಿದೆ ಎಂದರು.

        ಈ ಸಂದರ್ಭದಲ್ಲಿ ತಹಶೀಲ್ದಾರ ಕೆ.ಗುರುಪ್ರಸಾದ ಪುರಸಭೆ ಮುಖ್ಯಾಧಿಕಾರಿ ವಿ.ಎಮ್.ಪೂಜಾರ, ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಸತೀಶ ಮಡಿವಾಳರ, ಸಮಾಜ ಭಾಂದವಾರದ ನಾಗರಾಜ ಮಡಿವಾಳರ, ಮಾಲತೇಶ ಮಡಿವಾಳರ, ಪ್ರಕಾಶ ತಾವರಗಿ, ಬಸವರಾಜ ಮಡಿವಾಳರ, ಚೀಕ್ಕಪ್ಪ ಮಡಿವಾಳರ, ಹನುಮಂತ ಮಡಿವಾಳರ, ದಿಳ್ಳೇಪ್ಪ ಮಡಿವಾಳರ ಸೇರಿದಂತೆ ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link