ದಾವಣಗೆರೆ:
ನಗರದ ಬಾಪೂಜಿ ಎಂಬಿಎ ಪ್ರೋಗ್ರಾಂ ಆಡಿಟೋರಿಯಂನಲ್ಲಿ ಫೆ.18ರಂದು ಮಧ್ಯಾಹ್ನ 3 ಗಂಟೆಗೆ ಆದಾಯ ತೆರಿಗೆ ಕಾನೂನುಗಳ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ತೆರಿಗೆ ಸಲಹೆಗಾರರ ಸಂಘ ಹಾಗೂ ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ ಡಾ.ಜಿ.ಮನೋಜ್ ಕುಮಾರ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸುನೀಲ್ ಕುಮಾರ್ ಅಗರವಾಲ್, ಎ.ಬಿ.ಶಂಭುಲಿಂಗಪ್ಪ, ಎ.ಎಸ್.ವೀರಣ್ಣ, ಕಿರಣ್ ಪಾಟೀಲ್, ಬಿ.ಜಿ.ಬಸವರಾಜಪ್ಪ, ಎಸ್.ಭಾಸ್ಕರ್ ಮತ್ತಿತರು ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತರಾದ ಡಾ.ಜಿ.ಮನೋಜ್ ಕುಮಾರ್, ಬಿ.ಜಿ. ಬಸವರಾಜಪ್ಪ, ವಿನಯ್ ಕುಮಾರ್, ಕಿರಣ್ ಪಾಟೀಲ್ ಮತ್ತಿತರರು ಹಾಜರಿದ್ದರು.