ಹರಪನಹಳ್ಳಿ:
ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ನಿಗದಿಯಾಗಿದ್ದ ಸಭೆಯನ್ನು ರದ್ದು ಪಡಿಸಲಾಗಿದೆ ಎಂದು ಕಾರ್ಯನಿರ್ವಾಣಾಧಿಕಾರಿ ಮಮತಾ ಹೊಸಗೌಡರ ಹೇಳಿದರು.ಪಟ್ಟಣದ ತಾಲ್ಲುಕು ಪಂಚಾಯ್ತಿಯ ರಾಜೀವಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷಕುಮಾರ ಹಾಗೂ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಚರ್ಚೆಯಾಗಬೇಕಿತ್ತು. ಆದರೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಅವಿಶ್ವಾಸ ನಿರ್ಣಯ ಕ್ರಮಬದ್ಧವಾಗಿಲ್ಲ ಎಂದು ಉಚ್ಚನ್ಯಾಯಾಲಯದಲ್ಲಿ ರಿಟ್ ಪಿಟಿಶನ್‍ಗಳಿಗೆ ಸಂಬಂಧಿಸಿದಂತೆ ತಮ್ಮ ವಿವೇಚನೆಯಿಂದ ದೃಢೀಕೃತವಾಗಿದೆ. ಸರ್ಕಾರಿ ವಕೀಲರ ಕಾನೂನು ಸಲಹೆಯಂತೆ ಕರ್ನಾಟಕ ಉಚ್ಚನ್ಯಾಯಾಲಯದ ಆದೇಶದ ಪಾಲನೆಗೆ ಸಭೆಯನ್ನು ರದ್ದು ಪಡಿಸಿದ್ದೇನೆ ಎಂದರು.
ಇದಕ್ಕೆ ಪ್ರತಿಯಾಗಿ ಒಟ್ಟು 26 ಸದಸ್ಯರನ್ನು ಹೊಂದಿರುವ ತಾಲ್ಲೂಕು ಪಂಚಾಯ್ತಿಯ 19 ಸದಸ್ಯರು ಇದಕ್ಕೆ ಸೊಪ್ಪು ಹಾಕದ ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದುರು. ತಾವು ಸಲ್ಲಿಸಿದ ಅವಿಶ್ವಾಸ ಗೊತ್ತುವಳಿಗೆ ನ್ಯಾಯಾಲಯ ವಿಶೇಷ ಸಭೆಯನ್ನು ರದ್ದು ಪಡಿಸಬೇಕೆಂದು ನೀಡಿರುವ ಆದೇಶ ಪ್ರತಿಯನ್ನು ತೋರಿಸಿ ಇಲ್ಲದಿದ್ದರೆ ಸಭೆಯನ್ನು ನಡೆಸಬೇಕು ಎಂದು ಮಾತಿನ ವಾಗ್ವದ ನಡೆದು ಗೊಂದಲಲ್ಲೇ ಸಭೆಯನ್ನು ರದ್ದು ಪಡಿಸಲಾಯಿತ್ತು.
ಕಾಂಗ್ರೆಸ್ ಬೆಂಬಲಿತ 19 ಸದಸ್ಯರು ಸಭೆಯಿಂದ ಹೊರಬಂದು ಅಧಿಕಾರ ದುರುಪಯೋಗ ಮಾಡಿಕೊಂಡ ಇಓ ಮಮತಾ ಗೌಡರ ವಿರುದ್ದು ದಿಕ್ಕಾರ ಹಾಕಿ ಸುದ್ಧಿಗಾರರೊಂದಿಗೆ ಮಾತನಾಡಿದರು.
ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ, ಇಓ ಅವರು ನ್ಯಾಯಾಲಯದ ಆದೇಶ ಪ್ರತಿ ಇಲ್ಲದೇ ಸಭೆಯನ್ನು ರದ್ದು ಮಾಡಿರುವುದು ಪ್ರಜಾಪ್ರಭುತ್ವದ ಕಾನೂನುಗಳನ್ನು ಧಿಕ್ಕರಿಸಿದ್ದಾರೆ. ತಾಲ್ಲೂಕಿನಲ್ಲಿ ಬಿಜೆಪಿ ಆಡಳಿತ ವಿರುವುದರಿಂದ ಚುನಾಯಿತ ಪ್ರತಿನಿಧಿಗಳಿಗೆ ಬೆಲೆಯಿಲ್ಲ. ಅಧಿಕಾರಿಗಳಿಂದ ಅಧಿಕಾರ ದುರುಪಯೋಗ ಮಾಡುತ್ತಿರುವ ಬಿಜೆಪಿ ಇತಿಹಾಸ ಮರುಕಳಿಸಿದೆ ಎಂದರು.
ಚಿಗಟೇರಿ ಕ್ಷೇತ್ರದ ಸದಸ್ಯ ಓ.ರಾಮಣ್ಣ ಮಾತನಾಡಿ, ಅವಿಶ್ವಾಸ ಗೊತ್ತುವಳಿಗೆ ಸಲ್ಲಿಸುತ್ತಿರುವ ಅರ್ಜಿಯು ಕಾನೂನು ರೀತಿ ಕ್ರಮಬದ್ಧವಾಗಿಲ್ಲ ಎಂದು ಉಪವಿಭಾಗಾಧಿಕಾರಿ ಅಥವಾ ಇಓ ಅವರು ಸದಸ್ಯರ ಗಮನಕ್ಕೆ ತರದೇ ಮರೆಮಾಚಿದ್ದಾರೆ. ಅಂದೇ ತಮ್ಮ ಅರ್ಜಿಯನ್ನು ಹಿಂತಿರುಗಿಸಿದ್ದರೆ ಕ್ರಮಬಧ್ಧ ಅರ್ಜಿಯನ್ನು ಸಲ್ಲಿಸುತ್ತಿದ್ದವು. ರಾಜಕೀಯ ದುರುದ್ದೇಶದಿಂದ ಅಧಿಕಾರಿಗಳು ಸಮಾಜಿಕ ನ್ಯಾಯ ಒದಗಿಸಿಲ್ಲ ಎಂದರು.
ಬಾಗಳಿ ಕ್ಷೇತ್ರದ ಸದಸ್ಯೆ ಲತಾ ಮಾತನಾಡಿ, ಅವಿಶ್ವಾಸ ಗೊತ್ತುವಳಿಗೆ ಸಭೆ ನಡೆಸುವುದಾಗಿ ಉಪವಿಭಾಗಾಧಿಕಾರಿಗಳು ಹಾಗೂ ಇಓ ಅವರು ನೋಟೀಸ್ ಜಾರಿಮಾಡಿದ್ದಾರೆ. ಇಂದು ಸಭೆ ನಡೆಸುವುದಿಲ್ಲ ಎಂದು ಜನಪ್ರತಿನಿಧಿಗಳಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ದೂರಿದರು.ಸ್ಥಾಯಿಸಮಿತಿ ಅಧ್ಯಕ್ಷ ವೆಂಕಟೇಶರೆಡ್ಡಿ ಮಾತನಾಡಿ, ನಾವು ಸಲ್ಲಿಸಿ ಅವಿಶ್ವಾಸ ಗೊತ್ತುವಳಿ ಕ್ರಮಬದ್ದವಾಗಿಲ್ಲ ಎಂದು ನಿರಾಕರಿಸಿದ್ದಾರೆ. ಮತ್ತೆ 19 ಸದಸ್ಯರು ಒಟ್ಟಾಗಿ ಕ್ರಮಬದ್ಧವಾಗಿ ಅವಿಶ್ವಾಸ ಗೊತ್ತುವಳಿಗೆ ಅರ್ಜಿ ಸಲ್ಲಿಸುತ್ತೇವೆ ಎಂದರು.