ರಾತ್ :
ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹುತಿ ಬಾಂಬ್ ದಾಳಿಯಿಂದ ಗಡಿ ಕಾಯುವ ಸೈನಿಕರ ರಕ್ಷಣೆಯ ಮೇಲೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಇದರ ನಡುವೆ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಎಂದು ಮನನೊಂದ ಸೈನಿಕನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆಯೊಂದು ಗುಜರಾತ್ನ ದ್ವಾರಕ ಜಿಲ್ಲೆಯಲ್ಲಿ ನಡೆದಿದೆ.
ಪುಲ್ವಾಮಾ ದಾಳಿ ಬಳಿಕ ಭಯಕ್ಕೆ ಒಳಗಾಗಿದ್ದ ಸೈನಿಕ ಭೂಪೇಂದ್ರ ಶಿನ್ ಪತ್ನಿ 22 ವರ್ಷದ ಮೀನಾಕ್ಷಿ ಜೇಥ್ವಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಸೈನಿಕನನ್ನ ಮೀನಾಕ್ಷಿ ವಿವಾಹವಾಗಿದ್ದರು. ಪತಿ ಜಮ್ಮು-ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಎಂದು ಮನನೊಂದ ಸೈನಿಕನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
