ಶಿರಸಿ:
ಕಾಡು ಹಂದಿ ಮತ್ತು ಆಮೆಯನ್ನು ಬೇಟೆಯಾಡಿ ಪದಾರ್ಥ ತಯಾರಿಸುತ್ತಿದ್ದ ಆರೋಪಿಯೊಬ್ಬನನ್ನು ಆಹಾರ ಸಾಮಗ್ರಿ ಸಹಿತ ವಶಪಡಿಸಿಕೊಂಡ ಘಟನೆ ಎಕ್ಕಂಬಿ ಸಮೀಪದ ಮೂಡೆಬೈಲ್ ಎಂಬಲ್ಲಿಂದ ಅ. 10ರಂದು ನಡೆದ ಬಗ್ಗೆ ವರದಿಯಾಗಿದೆ. ಮುಡೆಬೈಲ್ ನ ಶಂಕರ ಲಕ್ಷ್ಮಣ ನಾಯ್ಕ್, ಗಂಗಾಧರ ಗಣಪತಿ ಗೌಡ ಸಾ :ಮುಡೆಬೈಲ್ ಹಾಗೂ ಶಂಕರ ಬೊಮ್ಮು ಗೌಡ ಸಾ: ಮುಡೆಬೈಲ್ ಆರೋಪಿಗಳಾಗಿದ್ದು,ಬನವಾಸಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು,ಬನವಾಸಿ RFO ಶ್ರೀಮತಿ ಭವ್ಯ ನಾಯ್ಕ್ ತನಿಖೆ ನಡೆಸುತ್ತಿದ್ದಾರೆ.








