ಹರಪನಹಳ್ಳಿ
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುವರ್ಣ ಆರುಂಡಿ ನಾಗರಾಜ, `ಛತ್ರಿಪತಿ ಶಿವಾಜಿ ಮಹಾರಾಜರು ದೇಶದ ಸ್ವಾಭಿಮಾನದ ಪ್ರತೀಕ. ದೇಶದಲ್ಲಿ ಹಿಂದುತ್ವ ಉಳಿವಿಗಾಗಿ ಹಾಗೂ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಹೋರಾಟ ನಡೆಸಿದ ಮಹಾನ್ ನಾಯಕ ಅವರಾಗಿದ್ದರು. ಶಿವಾಜಿ ಮಹಾರಾಜರನ್ನು ಒಂದೇ ಜಾತಿ, ಧರ್ಮಕ್ಕೆ ಸೀಮಿತಗೊಳಿಸದೇ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕ್ಷತ್ರಿಯ ಮರಾಠ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಲಕ್ಷ್ಮಣರಾವ್ ಜಾದವ್ ಮಾತನಾಡಿ, `ಶಿವಾಜಿ ಮಹಾರಾಜ ಭಾರತ ಮಾತೆಯ ಹೆಮ್ಮೆಯ ಸುಪುತ್ರ. ಬಲಿಷ್ಠ ರಾಷ್ಟ್ರ ಕಲ್ಪನೆ ಅವರದ್ದಾಗಿತ್ತು. ತನ್ನ ಹೋರಾಟದ ಮನೋಭಾವದಿಂದಲೇ ವಿಶ್ವದ ಗಮನ ಸೆಳೆದಿದ್ದರು. ತನ್ನ ಆಡಳಿತಾವಧಿಯಲ್ಲಿ ಎಲ್ಲ ವರ್ಗದವರ ಜೀವಾನಾಭಿವೃದ್ಧಿಗೆ ಶ್ರಮಿಸಿದ್ದರು’ ಎಂದು ಹೇಳಿದರು. ಕಾರ್ಯದರ್ಶಿ ಮಂಜುನಾಥ ರಾವ್ ಶಿಂಧೆ, ಮಜ್ಜಿಗೆರೆ ಗ್ರಾಮ ಘಟಕದ ನಿಂಗಣ್ಣ ಮಾನೆ, ಮುಖಂಡರಾದ ನಿಚ್ಚವನಹಳ್ಳಿ ಭೀಮಪ್ಪ, ಅಧಿಕಾರಿಗಳಾದ ಸೋಮಣ್ಣ, ಸುಧೀರ್ ನಾಯ್ಕ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
