ಹಾಸನ:
ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇ ಗೌಡ ಇಂದು ಅವಾಜ್ ಹಾಕಿರುವ ಘಟನೆ ನಡೆದಿದೆ.
ಇಂದು ಹಾಸನ ಕೆಡಿಪಿ ಸಭೆ ನಡೆಯುತಿತ್ತು, ಈ ವೇಳೆ ಕುಡಿಯುವ ನೀರಿನ ಟ್ಯಾಂಕರ್ ಗೆ ಬಿಲ್ ಮಂಜೂರು ವಿಚಾರದಲ್ಲಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.
ಬಿಲ್ ಮಂಜೂರಿಗೂ ಮುನ್ನ ರೇವಣ್ಣ ಅವರು ಥರ್ಡ್ ಪಾರ್ಟಿ ವಿಚಾರಣೆ ಮಾಡಿ ಟ್ಯಾಂಕರ್ ಗಳಲ್ಲಿ ನೀರು ಕೊಟ್ಟು ಬಿಲ್ ಮಾಡಬೇಡಿ. ಬೋರ್ ವೆಲ್ ತೆಗೆಸಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಶಾಸಕರು, ಅಣ್ಣೋ.. ನನ್ನ ಮೇಲೆ ಅನುಮಾನ ಪಡುತ್ತಿದ್ದೀರಾ. ನಾನು 227 ಹಳ್ಳಿಗಳೀಗೆ ಟ್ಯಾಂಕರ್ ಗಳಲ್ಲಿ ನೀರು ಕೊಡಿಸಿದ್ದೀನಿ ಎಂದು ಯಾವನೋ ಹೇಳಿದ್ದು ಎಂದು ಏರು ಧ್ವನಿಯಲ್ಲೇ ಸಭೆಯಲ್ಲಿ ಪ್ರಶ್ನಿಸಿದರು.
ಇನ್ನು ಶಿವಲಿಂಗೇಗೌಡ ಮಾತಿಗೆ ಸಚಿವ ರೇವಣ್ಣ ಅವರು ಒಂದು ಬಾರಿ ತಬ್ಬಿಬ್ಬಾಗಿದ್ದಾರೆ. ಬಳಿಕ ಆಯ್ತು ಶಿವಲಿಂಗಣ್ಣ ಪಾಪ ನಾಲ್ಕು ವರ್ಷದಿಂದ ಕಷ್ಟಪಟ್ಟಿದ್ದಾನೆ ಬಿಲ್ ಕೊಡಿ ಎಂದು ಅಧಿಕಾರಿಗಳಿಗೆ ರೇವಣ್ಣ ಅವರು ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
