ಬೆಂಗಳೂರು
ಜಗತ್ತಿನಲ್ಲಿ ವಾಸಿಸುವ ಮಾನವ ಸೇರಿ ಸಕಲ ಜೀವರಾಶಿಗಳಿಗೆ ಹಸಿವು ಒಂದಲ್ಲ ದಿನ ಕಾಡಿ ಅನ್ನದ ಪ್ರಾಮುಖ್ಯ ಗೊತ್ತಿರುತ್ತದೆ ಹಸಿವು ನೀಗಿಸುವ ‘ಅನ್ನ ವ್ಯರ್ಥ’ ಆಗದಂತೆ ನೋಡಿಕೊಳ್ಳಲು ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ ತಿಳಿಸಿದರು.
ತುತ್ತು ಅನ್ನಕ್ಕೂ ಹಲವಾರು ಮಂದಿ ತುಂಬಾ ಕಷ್ಟಪಡ್ತಾರೆ. ಆದರೆ, ಮದುವೆ ಸಮಾರಂಭ ಸೇರಿದಂತೆ ಇನ್ನಿತರೆ ಸಾಮೂಹಿಕ ಕಾರ್ಯಕ್ರಗಳಲ್ಲಿ ತಟ್ಟೆಗೆ ಅನ್ನ ಹಾಕಿಸಿಕೊಂಡು, ಉಳಿಸುತ್ತಾರೆ. ಇದರಿಂದ ಅನ್ನ ವ್ಯರ್ಥವಾಗುತ್ತದೆ. ಸ್ಕೌಟ್ಸ್ ಗೈಡ್ಸ್ನ ರೋವರ್ಸ್-ರೇಂಜರ್ಸ್ ಗಳಿಂದ ರಾಜ್ಯ ವ್ಯಾಪ್ತಿ ಅನ್ನ ವ್ಯರ್ಥ ಮಾಡದಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ, ಸಂಸ್ಥಾಪಕರ ಹುಟ್ಟು ಹಬ್ಬ, ವಿಶ್ವಭ್ರಾತತ್ವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದ ಅವರು.ಪ್ರಸ್ತುತ ಸಾಲಿನ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಸ್ಕೌಟ್ಸ್ ಗೈಡ್ಸ್ ಕಾರ್ಯ ಚಟುವಟಿಕೆಗಳಿಗೆ 7 ಕೋಟಿ ರೂ. ಅನುದಾನ ಬಿಡುಗಡೆ ನೀಡಿದ್ದು, ಮಂದಿನ ದಿನಗಳಲ್ಲಿ ಹಂತ ಹಂತವಾಗಿ, ಹೊಸ ಕಾರ್ಯಕ್ರಮ ರೂಪಿಸುವುದಾಗಿ ಅವರು ತಿಳಿಸಿದರು.
ವ್ಯಕ್ತಿತ್ವ ಗುಣ ಮುಖ್ಯ
ಯಾವುದೇ ಒಂದು ಗುಂಪು ಮುನ್ನಡೆಯಬೇಕಾದರೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಇದೆ. ನಾಯಕತ್ವ ಗುಣಗಳನ್ನು ಬೆಳೆಸುವ ತರಬೇತಿ ಕಾರ್ಯಕ್ರಮಗಳು ಅತ್ಯವಶ್ಯಕ. ನಾಯಕರಾದವರು ಅಹೋ ರಾತ್ರಿ ಉದ್ಭವವಾಗುವುದಿಲ್ಲ ಬದಲಿಗೆ ಅವಿರತ ಶ್ರಮ, ಉತ್ತಮ ವ್ಯಕ್ತಿತ್ವ ಮತ್ತು ಗುಣ ಮೈಗೂಡಿಸಿಕೊಳ್ಳಬೇಕಾಗುತ್ತದೆ ನಗರದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್ ತಿಳಿಸಿದರು.
ಫೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಅರವಿಂದ್ ವರ್ಮ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳಲ್ಲಿ ಶಿಸ್ತು, ಸಹಬಾಳ್ವೆ, ಸಮಾನತೆ ಮತ್ತು ಭಾತೃತ್ವದ ಗುಣಗಳನ್ನು ಬೆಳೆಸುವ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.
ಅಂಚೆ, ಶ್ರದ್ಧಾಂಜಲಿ: ವಿಶ್ವ ಸ್ಕೌಟ್ಸ್ ಗೈಡ್ಸ್ ದಿನಾಚರಣೆ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು. ಬಳಿಕ, ಜಮ್ಮು ಕಾಶ್ಮೀರ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ, ಸ್ಕೌಟ್ಸ್ ಗೈಡ್ಸ್ ಸದಸ್ಯರು ಪಕ್ಷ ಮೊಂಬತ್ತಿ ಬೆಳಗಿಸಿದರು.
ಕಾರ್ಯಕ್ರಮದಲ್ಲಿ ನಗರದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚೆನ್ನಣ್ಣನವರ್, ರಾಜ್ಯ ಆಯುಕ್ತ (ಸ್ಕೌ) ಎಂ.ಎ.ಖಾಲೀದ್, ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್, ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್, ತರಬೇತಿ ಆಯುಕ್ತ ಕೆ.ವಿ. ಶಾಮಲಾ, ಕಾರ್ಯದರ್ಶಿ ಗಂಗಪ್ಪಗೌಡ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







