ಯಾರಿಗೂ ತಾರತಮ್ಯ ಮಾಡಲ್ಲ;ತಿಪ್ಪಾರೆಡ್ಡಿ

ಚಿತ್ರದುರ್ಗ

      ಜನರು, ವರ್ತಕರ ವಿಶ್ವಾಸ ಇಲ್ಲದೆ ಹಾಗೂ ಯಾರಿಗೂ ತಾರತಮ್ಯ ಮಾಡದೆ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

        ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ರಸ್ತೆ ಅಗಲೀಕರಣ ಸಂಬಂದಿಸಿದಂತೆ ವರ್ತಕರ ಮತ್ತು ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ನಾನೊಬ್ಬ ವ್ಯಾಪಾರಿ. ನನಗೂ ಎಲ್ಲರ ಕಷ್ಟ ಅರ್ಥವಾಗುತ್ತದೆ. ಏಕಾಏಕಿ ಅಥವಾ ಸರ್ವಾಧಿಕಾರದಿಂದ ರಸ್ತೆ ಅಗಲೀಕರಣ ಮಾಡುವುದಿಲ್ಲ.

        ನಗರದ ಚಳ್ಳಕೆರೆ ಗೇಟ್‍ನಿಂದ ಪ್ರವಾಸಿಮಂದಿರವರೆಗೆ 15 ಮೀಟರ್ ಎರಡು ರಸ್ತೆ ಬದಿಯಲ್ಲಿಯೂ ಅಗಲೀಕರಣ ಮಾಡಲಾಗುವುದು. ಇದಕ್ಕಾಗಿ 19 ಕೋಟಿ ಅನುದಾನ ಇದೆ. ಪ್ರವಾಸಿಮಂದಿರದಿಂದ ಗಾಂಧಿವೃತ್ತದ ಮಾರ್ಗವಾಗಿ ಅಜಾದ್‍ಪ್ಲೋರ್ ಮಿಲ್‍ವರೆಗೆ 13.50 ಮೀಟರ್ ಅಗಲೀಕರಣ ಮಾಡಲಾಗುವುದು ಇದಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

        ಏಕಾಏಕಿ ರಸ್ತೆ ಅಗಲೀಕರಣ ಮಾಡುವುದಿಲ್ಲ. ಇನ್ನೂ ಮೂರ್ನಾಲ್ಕು ತಿಂಗಳ ಸಮಯ ಇದೆ. ಉತ್ತಮ ಗುಣಮಟ್ಟದ ಹೈಟೆಕ್ ರಸ್ತೆ ನಿರ್ಮಾಣ ಮಾಡಲಾಗುವುದು. ನಾನು ಜನರ ಪರವಾಗಿರುತ್ತೇನೆ. ಯಾರಿಗೂ ಅನ್ಯಾಯ ಮಾಡಲು ಬಿಡುವುದಿಲ್ಲ. ಜನರು ಸಹ ಅಭಿವೃದ್ದಿ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೆ ಅದಕ್ಕೆ ಬೇಸರ ಪಟ್ಟಿಕೊಳ್ಳಬಾರದು. 13.50 ಮೀಟರ್ ಅಗಲೀಕರಣ ಮಾಡಲಾಗುವುದು. ಇದಕ್ಕೆ ಈಗಲೇ ಎಲ್ಲರೂ ಮಾನಸಿಕವಾಗಿ ಸಿದ್ದರಾಗಿರುವಂತೆ ಸೂಚ್ಯವಾಗಿ ಹೇಳಿದರು.

        ಶಿವಮೊಗ್ಗ ನಗರ ಮಹಾನಗರಪಾಲಿಕೆಯಾಗಿದ್ದು ಅಗಲೀಕರಣವಾದಾಗ ಪರಿಹಾರ ನೀಡಲಾಗಿದೆ. ಆದರೆ ಇಲ್ಲಿ ಪರಿಹಾರ ಸಿಗುವುದಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋದರೂ ಪ್ರಯೋಜನವಾಗುವುದಿಲ್ಲ. ಅಗಲೀಕರಣ ವಿಚಾರದಲ್ಲಿ ಸರ್ಕಾರದ ಪರವಾಗಿ ತೀರ್ಪು ಹೊರಬೀಳಲಿದೆ. ಎಲ್ಲರ ಅಭಿಪ್ರಾಯವನ್ನು ಕ್ರೂಡೀಕರಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

        ಪ್ರವಾಸಿಮಂದಿರದವರೆಗೆ ರಸ್ತೆ ಅಗಲೀಕರಣಕ್ಕೆ 19 ಕೋಟಿ, ಪ್ರವಾಸಿಮಂದಿರದಿಂದ ಗಾಂಧಿ ವೃತ್ತದ ಮೂಲಕ ಮಾಳಪ್ಪನಹಟ್ಟಿ ರಸ್ತೆವರೆಗೆ 20 ಕೋಟಿ ಸೇರಿದಂತೆ ಕೋಟಿ ಕೋಟಿ ಅನುದಾನ ಕೇಂದ್ರದಿಂದಲೂ ತರಲಾಗುವುದು. ಹಂತಹಂತವಾಗಿ ಅಭಿವೃದ್ದಿ ಕಾರ್ಯ ಮಾಡಲಾಗುವುದು ಎಂದು ಶಾಸಕರು ಹೇಳಿದರು.

        ಪೌರಾಯುಕ್ತ ಚಂದ್ರಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸತೀಶ್‍ಬಾಬು, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಜಿ.ಜಗದೀಶ್ ಹಾಗೂ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link