ಬೆಂಗಳೂರು
ಪ್ರಯಾಣಿಕರ ಲಗೇಜ್, ಬ್ಯಾಗ್ಗಳನ್ನು ಇಳಿಸುವ ನೆಪ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿ ಮೋಜು ಮಾಡುತ್ತಿದ್ದ ಖತರ್ನಾಕ್ ಅಂತರರಾಜ್ಯ ಕಳ್ಳರ ಗ್ಯಾಂಗ್ನ್ನು ಬಲೆಗೆ ಕೆಡವಿರುವ ನಗರದ ದಂಡು ರೈಲ್ವೆ ಪೊಲೀಸರು ಬರೋಬರಿ 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರೈಲುಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತ ಸಹ ಪ್ರಯಾಣಿಕರ ಬ್ಯಾಗ್ಗಳಲ್ಲಿದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದ ದೆಹಲಿಯ ಸುಲ್ತಾನ್ ಪ್ರಿಯಾ, ರಣವೀರ್ ಸಿಂಗ್ (43), ಸತ್ಬೀರ್ (46), ವಿನೋದ್ (31), ಲಲಿತ್ ಕುಮಾರ್ (27) ಹಾಗೂ ಹರಿಯಾಣದ ಇಸ್ಸಾರದ ಶುಭಾಷ್ (44)ನಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.
ಬಂಧಿತರಿಂದ 28 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ದೆಹಲಿಯಿಂದ ಬಂದು ರಾಜ್ಯದ ವಿವಿಧೆಡೆ ರೈಲುಗಳಲ್ಲಿ ಪ್ರಯಾಣಿಕರಂತೆ ಸಂಚರಿಸುತ್ತಿದ್ದು ರೈಲುಗಳಲ್ಲಿ ಪ್ರಯಾಣಿಸುವ ಶ್ರೀಮಂತರನ್ನು ಗುರುತಿಸಿ ಅವರ ಲಗೇಜ್, ಬ್ಯಾಗ್ಗಳನ್ನು ಇಳಿಸುವಾಗ ಸಹಾಯ ಮಾಡುವ ನೆಪಮಾಡಿ ಗಮನ ಬೇರಡೆ ಸೆಳೆದು ಬ್ಯಾಗ್ಗಳಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದರು.
ರೈಲುಗಳಲ್ಲಿ ಪ್ರಯಾಣಿಕರ ಚಿನ್ನಾಭರಣಗಳು ಕಳವಾಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ಪೆÇಲೀಸ್ ತಂಡ, ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಕೆಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








