ಇಸ್ಲಮಾಬಾದ್:

ವಿಂಗ್ ಕಮಾಂಡರ್ ಅವರನ್ನು ಸ್ನೇಹ ಸಂಬಂಧದ ಮೇಲೆ ನಾಳೆ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಂದು ಪಾಕ್ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್ ಖಾನ್, ನಮ್ಮ ಸೆರೆಯಲ್ಲಿರುವ ಭಾರತದ ಪೈಲಟ್ ವಿಂಗ್ ಕಮಾಂಡರ್ ಅವರನ್ನು ಶಾಂತಿ ದ್ಯೋತಕವಾಗಿ ಬಿಡುಗಡೆ ಮಾಡಲಾಗುತ್ತೆ ಅಂತಾ ತಿಳಿಸಿದ್ದಾರೆ.
"In our desire of peace, I announce that tomorrow, and as a first step to open negotiations, Pakistan will be releasing the Indian Air Force officer in our custody." – Prime Minister @ImranKhanPTI pic.twitter.com/gjaaYBCzPn
— PTV News (@PTVNewsOfficial) February 28, 2019
ಸದ್ಯದ ಪರಿಸ್ಥಿತಿಯನ್ನು ಮುಂದುವರಿಸುವ ಇಚ್ಚೆ ನಮಗಿಲ್ಲ. ನಾನು ನಿನ್ನೆ ಸಂಜೆಯಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಲು ಯತ್ನಿಸಿದೆ. ಎಂದು ಇಮ್ರಾನ್ ಖಾನ್ ಸದನದಲ್ಲಿ ತಿಳಿಸಿದ್ದಾರೆ.
ಈ ಮೂಲಕ ಭಾರತದ ಒತ್ತಡಕ್ಕೆ ಪಾಕ್ ಮಣಿದಿದ್ದು, ಭಾರತಕ್ಕೆ ಅತಿದೊಡ್ಡ ರಾಜತಾಂತ್ರಿಕ ಜಯ ಸಿಕ್ಕಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








