ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ ಕಾರ್ಮಿಕ ಸಚಿವ…!!!

ಪಾವಗಡ :-

     ತಾಲ್ಲೂಕಿನ ಸರ್ವತೋನ್ಮಖ ಅಭಿವೃದ್ದಿ ಪಡಿಸಬೇಕೆಂದು ಸುಮಾರು 70 ಕೋಟಿ ರೂನಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮತ್ತು ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.

       ಅವರು ಗುರುವಾರ ಲೋಕೋಪಯೋಗಿ ಇಲಾಖೆ ಮತ್ತು ನಿರ್ಮಿತ ಕೇಂದ್ರ ಹಾಗೂ ಕೆ.ಆರ್.ಐ.ಡಿ.ಎಲ್ ವತಿಯಿಂದ ವಿವಿಧ ಯೋಜನೆಗಳಿಗೆ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆಯನ್ನು ಗುರುವಾರ ನೆರವೇರಿಸಿ ಮಾತನಾಡಿತ್ತಾ ನನ್ನಗೆ ತಾಲ್ಲೂಕಿನ ಜನತೆ ರಾಜಕೀಯದಲ್ಲಿ ಪುನರ್ ಜನ್ಮ ನೀಡಿದ ಜನತೆಗೆ ಮೂರು ನದಿಗಳ ಮೂಲಕ ನೀರು ತಂದು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ಶ್ರಮವಹಿಸುತ್ತೇನೆ ಎಂದು ತಿಳಿಸಿದರು.

        ಬರದ ನಾಡಲ್ಲಿ ನೀರಿನ ಮಟ್ಟ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಮಳೆಬೆಳೆಯಾಗದೆ ವಲಸೇ ಹೋಗುವಂತಾಗಿದೆ, ಅಪ್ಪರ್‍ಭಧ್ರಾ, ತುಂಗಭದ್ರ ಹಿನ್ನೀರು ಮತ್ತು ಎತ್ತೀನಹೋಳೆ ಯೋಜನೆಗಳಿಂದ ಪಾವಗಡಕ್ಕೆ ಶುದ್ದ ಕುಡಿಯುವ ನೀರು ಮತ್ತು ಕೆರೆಗಳಿಗೆ ಭಗೀರಥ ಹರಿಸುವ ಪ್ರಯತ್ನ ನನ್ನ ಅವಧಿಯಲ್ಲಿ ಮಾಡುತ್ತಿದ್ದೆನೆ ಎಂದರು.

       ತಾಲ್ಲೂಕಿನ ಅರಸೀಕೆರೆ,ಮದ್ಯೆ,ವದನಕಲ್ಲು,ಕಿಲಾರ್ಲಹಳ್ಳಿ,ದೊಮ್ಮತಮರಿ, ಗುಮ್ಮಘಟ್ಟ ಗ್ರಾಮಗಳಲ್ಲಿ ಲೋಕೊಪಯೊಗಿ ಇಲಾಖೆವತಿಯಿಂದ 13 ಕೋಟಿ ವ್ಯೆಚ್ಚದ ವಿವಿಧ ಕಾಮಾಗಾರಿಗಳಿಗೆ ಚಾಲನೆ ನೀಡಿ, ಪಿಆರ್‍ಇಡಿ ಇಲಾಖೆ ವತಿಯಿಂದ ಪಾವಗಡ ಬೊಮ್ಮತನಹಳ್ಳಿ ಮತ್ತು ಕುರುಬರ ಹಳ್ಳಿ ಗೇಟ್‍ನಿಂದ ಬೊಮ್ಮತನಹಳ್ಳಿ ರಸ್ತೆ ಅಭಿವೃದ್ದಿಗೆ 3.20 ಕೋಟಿ,ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಇಲಾಖೆವತಿಯಿಂದ 1 ಕೋಟಿ ವ್ಯೆಚ್ಚದ ದೇವರಾಜ್ ಅರಸ್ ಸಮುದಾಯ ಭವನ,50 ಲಕ್ಷ ವ್ಯೆಚ್ಚದ ಮೌಲಾನ ಅಜಾದ್ ಶಾಲೆ ಶಂಕುಸ್ಥಾಪನೆ,ವೆಂಕಟಾಪುರ ಗ್ರಾಮದಲ್ಲಿ 50 ಲಕ್ಷ ವ್ಯೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿರುವಾ ಪಶು ಆಸ್ಪತ್ರೆ ಉದ್ಘಾಟನೆ, ದೊಮ್ಮತಮರಿ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ನಿರ್ಮಿಸಿದ 36 ಲಕ್ಷ ವ್ಯೆಚ್ಚದ ಅಡುಗೆ ಸಹಾಯಕ ಮತ್ತು ನಿಲಯ ಪಾಲಕರ ವಸತಿ ಗೃಹಗಳ ಉದ್ಘಾಟನೆಯನ್ನು ನೇರವೆರಿಸಿದರು.

        ಈ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭ ಸದಸ್ಯರಾದ ಚಂದ್ರಪ್ಪ,ಮಾಜಿ ಶಾಸಕರಾದ ಸೋಮ್ಲಾನಾಯ್ಕ್,ತಾ.ಪಂ.ಅಧ್ಯಕ್ಷರಾದ ಸೊಗುಡು ವೆಂಕಟೇಶ್ ,ಜಿ.ಪಂ.ಸದಸ್ಯರಾದ ಹೆಚ್.ವಿ.ವೆಂಕಟೇಶ್,ತಾ.ಪಂ.ಉಪಾದ್ಯಕ್ಷರಾದ ನಾಗರಾಜು,ಸದಸ್ಯರಾದ ನಾಗೇಂದ್ರಪ್ಪ ,ರವಿ ಕುಮಾರ್,ಹನುಮಂತರಾಯ, ಮುಖಂಡರಾದ ಕೋಟೆಪ್ರಭಾಕರ್, ಶಾಬಾಬು,ಮಹಮದ್‍ಪಜುಲುಲ್ಲ, ಆರ್.ಕೆ.ನೀಸಾರ್ ,ಗುತ್ತಿಗೆದಾರರಾದ ಶಂಕರ್‍ರೆಡ್ಡಿ,ನಾರಾಯಣಪ್ಪ,ಮುಖಂಡರಾದ ಕೋಳಿಬಾಲಾಜಿ,ಪುರಸಭೆ ಸದಸ್ಯರಾದ ರಾಜೇಶ್,ಎ.ಪಿ.ಎಂ.ಸಿ ಅಧ್ಯಕ್ಷ ರವಿ, ಲೋಕೋಪಯೊಗಿ ಇಲಾಖೆಯ ಎ.ಎ.ಇ ವಿಜಯ್ ಕುಮಾರ್,ಸಹಾಯಕ ಇಂಜಿನಿಯರ್ ಎನ್.ಅನಿಲ್‍ಕುಮಾರ್,ನಿರ್ಮಿತಕೇಂದ್ರ ಯೋಜನಾ ಅಭಯಂತರರಾದ ಜಿ.ಆರ್.ಪುಟ್ಟಲಿಂಗಯ್ಯ,ರೊಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷ ತಿಮ್ಮಸ್ವಾಮಿ ಹಾಜರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap