ಮಧುಗಿರಿ : 32 ಕುರಿಗಳ ಮೇಲೆ ಚಿರತೆ ಹಿಂಡಿನಿಂದ ದಾಳಿ…..!

ಮಧುಗಿರಿ :

    ಐದು ಚಿರತೆಗಳ ಹಿಂಡೊಂದು ಸುಮಾರು 32 ಕುರಿಗಳ ಮೇಲೆ ದಾಳಿ ನೆಡೆಸಿದ್ದು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.ತಾಲ್ಲೂಕಿನ ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದ ಕುರಿಗಾಹಿ ರೈತ ಮಲ್ಲಣ್ಣ ಎಂಬುವರಿಗೆ ಸೇರಿದ 32 ಕುರಿಗಳಾಗಿದ್ದು ಮಂಗಳವಾರ ಮುಂಜಾನೆ ಚಿರತೆಗಳು ದಾಳಿ ನಡೆಸಿವೆ.

    ರೊಪ್ಪದಲ್ಲಿದ್ದ ಕುರಿಗಳ ಕಿರುಚಾಟ ಕೇಳಿ ಮಲ್ಲಣ್ಣ ಮತ್ತು ಕುಟುಂಬದವರು ಬಂದಾಗ ಐದು ಚಿರತೆಗಳನ್ನು ಕಂಡು ಭಯಭೀತರಾಗಿ ಸಹಾಯಕ್ಕಾಗಿ ಗ್ರಾಮದವರನ್ನು ಕೂಗಿ ಕರೆದಿದ್ದು ಜನರನ್ನು ನೋಡಿ ಏಳು ಕುರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಚಿರತೆಗಳು ಮತ್ತೆ ಕಾಡಿಗೆ ಓಡಿ ಹೋಗಿವೆ.ರೈತ ಮಲ್ಲಣ್ಣನ ಕುಟುಂಬಕ್ಕೆ ಕುರಿಗಳು ಜೀವನಧಾರವಾಗಿದ್ದವು ಮೃತಪಟ್ಟ ಕುರಿಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರಿಂದ ಮನವಿ ಮಾಡಿದ್ದಾರೆ.

   ಗ್ರಾ.ಪಂ. ಸದಸ್ಯ ರವಿ ಹಾಗೂ ಕೆ ಡಿ ಎಸ್ ಎಸ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಗ್ರಾಮಸ್ಥರಿಂದ ರೈತ ಕುಟುಂಬಕ್ಕೆ ಧೈರ್ಯ ತುಂಬಿದ್ದು ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುರೇಶ್, ಪಶುಸಂಗೋಪನೆ ಇಲಾಖೆ ಹಿರಿಯ ಸಹಾಯ ನಿರ್ದೇಶಕ ಸಿದ್ದನಗೌಡ ,ಉಪವಲಯ ಅರಣ್ಯಾಧಿಕಾರಿ ಮುತ್ತುರಾಜ್ ಭೇಟಿ ಪರಿಶೀಲನೆ ನೆಡೆಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap