ಹೊಚ್ಚ ಹೊಸ 20 ರೂ. ನಾಣ್ಯ ಘೋಷಣೆ!

      12 ಕೋನದ ಪಾಲಿಗಾನ್ ಆಕೃತಿಯುಳ್ಳ ಹೊಚ್ಚ ಹೊಸ 20 ರು ನಾಣ್ಯ ಉತ್ಪಾದನೆ ಕುರಿತಂತೆ ವಿತ್ತ ಸಚಿವಾಲಯವು ಪ್ರಕಟಣೆ ಹೊರಡಿಸಿದೆ.

      ನಾಣ್ಯ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ‘ವಿವಿಧ ವಿಭಿನ್ನ ಮತ್ತು ಗುಣಲಕ್ಷಣಗಳೊಂದಿಗೆ ಹೊಸ ಪರಿಚಲನೆಯ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಇವು ದೃಷ್ಟಿ ವಿಕಲ ಚೇತನರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲಕರ ಆಗಲಿದೆ. ಕೇಂದ್ರ ಸರ್ಕಾರವು ಚಲಾವಣೆ ಸ್ನೇಹಿ ಹಾಗೂ ಸೂಕ್ಷ್ಮತೆಯಿಂದ ಇವುಗಳನ್ನು ಟಂಕಿಸಿದೆ’ ಎಂದು ಹೇಳಿದರು.
      2009ರ ಮಾರ್ಚ್​ನಲ್ಲಿ ಮೊದಲ ಬಾರಿಗೆ10 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಲಾಗಿತ್ತು. ಅದ್ದಾದ 10 ವರ್ಷಗಳ ನಂತರ ನೂತನ 20 ರೂ. ನಾಣ್ಯ ಚಲಾವಣೆಗೆ ಬರುತ್ತಿದೆ. ಇದರ ಜೊತೆಗೆ ದೃಷ್ಟಿ ವಿಕಲ ಚೇತನರ ಬಳಕೆಗೂ ಸಹಾಯಕ ಆಗುವಂತಹ ನೂತನ ಸರಣಿಯ ₹ 1, ₹ 2, ₹ 5 ಹಾಗೂ ₹ 10 ಮುಖಬೆಲೆಯ ನಾಣ್ಯಗಳು ಸಹ ಲೋಕಾರ್ಪಣೆಗೊಂಡವು.

  

​      8.54 ಗ್ರಾಂ ತೂಕದ 20 ರೂ. ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ, ಅಶೋಕನ ಸಾರಾನಾಥ ಶಾಸನದ ‘ಸತ್ಯಮೇವ ಜಯತೆ’ ಅಚ್ಚಾಗಿದೆ. ಎಡ ಭಾಗದಲ್ಲಿ ‘ಭಾರತ್’ ಎನ್ನುವ ಹಿಂದಿ ಭಾಷಾ ಪದವಿದ್ದು, ಬಲಭಾಗದಲ್ಲಿ ‘ಇಂಡಿಯಾ’ ಎಂಬ ಇಂಗ್ಲಿಷ್​ ಬರಹವಿದೆ.

      ಕೃಷಿ ಪ್ರಧಾನ ಭಾರತದಲ್ಲಿ ಅದರ ಮಹತ್ವ ಸಾರುವ ಉದ್ದೇಶದಿಂದ ನಾಣ್ಯದ ಹಿಂಬದಿಯಲ್ಲಿ ಧಾನ್ಯಗಳ ಚಿತ್ರ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 20 ರೂಪಾಯಿಗಳು ಎಂದು ಅಕ್ಷರಗಳಲ್ಲಿ ಬರೆಯಲಾಗಿದೆ. ಇದರ ಮಧ್ಯದಲ್ಲಿ ನಾಣ್ಯ ಬಿಡುಗಡೆಯಾದ ವರ್ಷವನ್ನು ಸಹ ಮುದ್ರಿತವಾಗಿದೆ.

      ನಾಣ್ಯದ ಹೊರ ಸುತ್ತು 65% ತಾಮ್ರ, 15% ಸತು ಮತ್ತು 20 % ನಿಕ್ಕಲ್ ಹೊಂದಿದೆ. ಒಳ ಸುತ್ತು ಅಥವಾ ನಾಣ್ಯದ ಕೇಂದ್ರಭಾಗವು 75% ತಾಮ್ರ, 20% ಸತು ಮತ್ತು 5% ನಿಕ್ಕಲ್ ನಿಂದ ಮಾಡಲ್ಪಟ್ಟಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap