ನವದೆಹಲಿ:
ಎಂಎಲ್ ಸಿ ಹೆಚ್.ವಿಶ್ವನಾಥ್ ಅನರ್ಹತೆ ಪ್ರಕರಣಕ್ಕೆ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಸಚಿವ ಸ್ಥಾನ ಸಿಗಲೇಬೇಕೆಂದು ಕಾದು ಕುಳಿತಿದ್ದ ವಿಶ್ವನಾಥ್ ಗೆ ಮತ್ತೆ ಹಿನ್ನಡೆಯಾಗಿದೆ.
ನಾಮನಿರ್ದೇಶನ ಆಧಾರದಲ್ಲಿ ಸಚಿವ ಸ್ಥಾನ ಅಸಾಧ್ಯ ಎಂದು ಈ ಹಿಂದೆ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ವಿಶ್ವನಾಥ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿದ್ದ ಆಧಾರದ ಮೇಲೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಎತ್ತಿ ಹಿಡಿದಿದೆ.
Supreme Court dismisses a plea of BJP Member of Legislative Council (MLC) AH Vishwanath challenging Karnataka High Court order disqualifying him from being appointed as a state minister.
— ANI (@ANI) January 28, 2021
ಸಾಹಿತ್ಯ ಕೋಟಾದಡಿಯಲ್ಲಿ ರಾಜ್ಯ ಸರ್ಕಾರ ವಿಶ್ವನಾಥ್ ಅವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿತ್ತು. ನಾಮನಿರ್ದೇಶನದ ಬಳಿಕ ಸಚಿವರಾಗಲು ವಿಶ್ವನಾಥ್ ಪ್ರಯತ್ನಿಸಿದ್ದರು. ಆದರೆ ಇದೀಗ ಅವರ ಕನಸು ಭಗ್ನಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ