ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮ…!!!

ಹಾನಗಲ್ಲ :

       ಹಾನಗಲ್ಲ ತಾಲೂಕಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮತದಾನದ ದಿನದವರೆಗೆ ವಿವಿಧ ರೂಪದ ಕಾರ್ಯಕ್ರಮಗಳನ್ನು ತಾಲೂಕು ಆಡಳಿತ ಹಮ್ಮಿಕೊಂಡಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಂಜುನಾಥ ಹೇಳಿದರು.

        ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ವೀಪ್ ಸಮಿತಿ ಸಹಯೋಗದಲ್ಲಿ ಪಟ್ಟಣದ ಗುರುಭವನದಲ್ಲಿ ನಡೆದ ಮತದಾರರ ಸಾಕ್ಷರತಾ ಸಂಘದ ಸಂಚಾಲಕರು, ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸುಭದ್ರ, ಪಾರದರ್ಶಕ, ಜನಪರ ಸರ್ಕಾರ ರಚಿಸುವಲ್ಲಿ ಪ್ರತಿಯೊಬ್ಬ ಮತದಾರನ ಗುರುತರ ಜವಾಬ್ದಾರಿಯಿದೆ.

         ಜಗತ್ತಿನಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಲು ಈ ಚುನಾವಣೆಯ ಮೂಲಕ ಉತ್ತಮ ಜನಪ್ರತಿನಿಧಿಗಳ ಆಯ್ಕೆಯಾಗಬೇಕು. ಪ್ರಾಮಾಣಿಕ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವಿದೆ. ಇಂಥ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಮೂಡಿಸಲು ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ.

         ಮತದಾನವನ್ನು ಮತದಾರ ತನ್ನ ಹಕ್ಕು ಚಲಾಯಿಸುವ ಅವಕಾಶ ಹಾಗೂ ಜವಾಬ್ದಾರಿ ಎಂಬುದನ್ನು ಅರಿತು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ತಹಸೀಲ್ದಾರ್ ಎಂ.ಗಂಗಪ್ಪ ಮಾತನಾಡಿ, ದಾನಗಳಲ್ಲಿ ಶ್ರೇಷ್ಠವಾದ ದಾನ ಮತದಾನವಾಗಿದೆ. ಸುಶಿಕ್ಷತ ಮತದಾರರು ಮತದಾನ ಮಾಡುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸದಿದ್ದರೆ ಅರಾಜಕತೆ ಅನುಭವಿಸಬೇಕಾಗುತ್ತದೆ.

          ಕಡ್ಡಾಯವಾಗಿ ಮತದಾನ ಕೈಗೊಳ್ಳುವಂತೆ ಪ್ರತಿಯೊಬ್ಬ ಮತದಾರನನ್ನೂ ಪ್ರೇರೇಪಿಸಬೇಕಿದೆ. ಇವಿಎಂ ಯಂತ್ರದ ಬಗೆಗೆ ಮತದಾರರಲ್ಲಿ ಯಾವುದೇ ಗೊಂದಲಗಳಿರಬಾರದು, ಯಂತ್ರವನ್ನು ಬಳಕೆ ಮಾಡುವ ವಿಧಾನವನ್ನೂ ತಿಳಿಯಪಡಿಸಬೇಕಿದೆ. 18 ವರ್ಷ ಪೂರೈಸಿದ ಯುವಕರನ್ನು ಮತಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ತನ್ಮೂಲಕ ಶೇ.90 ರಷ್ಟು ಮತದಾನದ ಗುರಿ ಹೊಂದಲಾಗಿದೆ. ಪಟ್ಟಿಯಲ್ಲಿ ಬಿಟ್ಟುಹೋಗಿರುವ ಹೆಸರುಗಳನ್ನೂ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು.

         ಬಿಇಓ ಎಚ್.ಶ್ರೀನಿವಾಸ ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಜೀವನಾಡಿ, ಜಗತ್ತಿನಲ್ಲಿ ಭಾರತವೇ ಹೆಚ್ಚು ಜನಪ್ರೀಯವಾದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಹೊಂದಿರುವ ರಾಷ್ಟ್ರ. ದೇಶದಲ್ಲಿ ನ್ಯಾಯಸಮ್ಮತ, ಮುಕ್ತ ಮತದಾನ ನಡೆಯಬೇಕು. ಮಾ.9 ರಿಂದ ಶಾಲಾ ಕಾಲೇಜ್‍ಗಳ ಶಿಕ್ಷಕರು, ವಿದ್ಯಾರ್ಥಿಗಳ ಮೂಲಕ ಮತದಾರರ ಮನೆ-ಮನೆಗೆ ತೆರಳಿ ಕಡ್ಡಾಯವಾಗಿ ಮತದಾನದಲ್ಲಿ ತೊಡಗುವಂತೆ ತಿಳುವಳಿಕೆ ನೀಡಲಾಗುತ್ತಿದೆ. ಹಿಂದಿನ ಎಲ್ಲ ಚುನಾವಣೆಗಿಂತ ಮತದಾನ ಈ ಬಾರಿ ಹೆಚ್ಚಿಸಲು ನಿರಂತರ ಪ್ರಯತ್ನ ಕೈಗೊಳ್ಳುತ್ತಿದ್ದೇವೆ ಎಂದರು.

       ಇದೇ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆಯ ಇವಿಎಂ ಯಂತ್ರದ ಕುರಿತು ಎಲ್ಲ ತರಬೇತುದಾರರಿಗೆ ಮಾಹಿತಿ ನೀಡಲಾಯಿತು. ಜಿಲ್ಲಾ ನೋಡಲ್ ಅಧಿಕಾರಿಗಳಾದ ಎಸ್.ಎಸ್.ಹಿರೇಮಠ, ಸಿಕಂದರ್ ಮುಲ್ಲಾ, ತಾಲೂಕು ಅಧಿಕಾರಿಗಳಾದ ಡಾ.ವಸಂತ ನಾಯ್ಕ್, ಸಿದ್ದಪ್ಪ ಜೋಗಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಕರೆಣ್ಣನವರ ಮೊದಲಾದವರು ಈ ಸಂದರ್ಬದಲ್ಲಿದ್ದರು. ಶ್ರೀನಿವಾಸ ದಿಕ್ಷೀತ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link