ಆನ್ ಲೈನ್ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಕಾರ್ಯಗಾರ

ಹಾವೇರಿ :

        “ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಯುವ ಪೀಳಿಗೆಯು ಸಮಾಜಿಕ ಜಾಲತಾಣದಿಂದಾಗುವ ಒಳಿತು-ಕೆಡಕುಗಳನ್ನರಿಯದೇ ಅದಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ಮಾದಕ ವಸ್ತುಗಳ ಸೇವನೆಗೆ ದಾಸರಾಗುತ್ತಿರುವುದು ವಶಾದದ ಸಂಗತಿಯಾಗಿದೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಜೆ.ಎ.ಜಗದೀಶ ಹೇಳಿದರು.

        ಅವರು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾವೇರಿ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರ ಹಾವೇರಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ “ಆನ್ ಲೈನ್ ಸುರಕ್ಷತೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ” ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಯುವಕರಷ್ಟೇ ಅಲ್ಲದೇ ಮಕ್ಕಳೂ ಸಹ ಅಂತರ್ಜಾಲವನ್ನು ಮನಸ್ಸಿಚ್ಛೆಯಂತೆ ಬಳಸುತ್ತಿದ್ದೇವೆ ಅತಿಯಾದರೆ ಅಮೃತವೂ ವಿಷವಾಗುತ್ತದೆ, ಜೊತೆಗೆ ಇಂತಹ ಮೋಸ/ಸಮಸ್ಯೆಗಳಿಗೆ ಒಳಗಾದವರ ನೆರವಿಗೋಸ್ಕರ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸೈಬರ್ ಕ್ರೈಂ ವಿಭಾಗವನ್ನು ತೆರೆಯಲಾಗಿದೆ, ಆದ್ದರಿಂದ ಪ್ರತಿಯೊಬ್ಬರೂ ಅಂತರ್ಜಾದ ಬಳಕೆಯ ಬಗ್ಗೆ ಹೆಚ್ಚು ಜಾಗೃತಿ ಜಾಗೃತಿವಹಿಸಬೇಕು ಇಂತಹ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿಯು ಉತ್ತಮ ಕಾರ್ಯನಿರ್ವಹಿಸುತ್ತಿದೆ ಹಾಗೂ ಮಕ್ಕಳಿಗೆ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆಮಾಡಿ ಮುಕ್ತವಾಗಿ ಹೇಳಿಕೊಳ್ಳಿ ಏಕೆಂದರೆ “ಚೈಲ್ಡ್‍ಲೈನ್ ಇದು ಮಕ್ಕಳ ಲೈಫ್ ಲೈನ್” ಎಂದು ಹೇಳಿದರು.

        ಮಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್.ಹೆಚ್,ಮಜೀದ್ ಮಾತನಾಡುತ್ತಾ ಯುವ ಜನರು ಪಾಶ್ಚಿಮಾತ್ಯ ಶೈಲಿಗೆ ಮಾರು ಹೋಗದೇ ದೇಶೀಯ ಸಂಸ್ಕøತಿಗೆ ಒತ್ತು ಕೊಡುವುದು ಅವಶ್ಯವಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಅಂತರ್ಜಾಲದ ವ್ಯಾಮೋಹಕ್ಕೆ ಮಾರುಹೋಗಿದ್ದೇವೆ.

       ಯುವಕರು ಮತ್ತು ಮಕ್ಕಳು  ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುತ್ತಿದ್ದು ತಮ್ಮ ವೈಯಕ್ತಿಕ ವಿಚಾರಗಳನ್ನು ಅವುಗಳಲ್ಲಿ ಹಾಕುವುದರಿಂದ ಸುಲಭವಾಗಿ ಮೋಸಹೊಗುತ್ತಿದ್ದಾರೆ, ಹಾಗೂ ಆನ್‍ಲೈನ್‍ನ ಮೂಲಕ ಬ್ಯಾಂಕ್ ಅಕೌಂಟ್‍ನಲ್ಲಿನ ಸಂಪೂರ್ಣ ಹಣವನ್ನು ವಂಚಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ, ನಮ್ಮ ಯುವಕರು ಅವರ ಮೋಜು-ಮಸ್ತಿಗಳ ನೆಪದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದು ಇದರ ಬಗ್ಗೆ ಎಲ್ಲರೂ ಹೆಚ್ಚು ತಿಳಿದುಕೊಳ್ಳಬೇಕು, ವಿಧ್ಯಾರ್ಥಿಗಳಾದವರು ಮೊಬೈಲ್‍ಗಳನ್ನು ಬಿಟ್ಟು ಪುಸ್ತಕಗಳ ಸ್ನೇಹಿತರಾಗಬೇಕು ಆಗ ಮಾತ್ರ ಸಮಾಜದ ಉತ್ತಮ ಪ್ರಜೆಯಾಗಿ ಅವರ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದರು,
ಮಕ್ಕಳ ಸಹಾಯವಾಣಿಯ ನಿರ್ದೇಶಕಿ ಶ್ರೀಮತಿ ಗೀತಾ ಪಾಟೀಲ್ ಮಾತನಾಡುತ್ತಾ “ಸದೃಧ ರಾಷ್ಟ್ರ ಜಾತ್ಯಾತೀತ ಸಮಾಜ ಯುವ ಜನರಿಂದ ಮಾತ್ರ ಸಾದ್ಯ, ಇಂದು ಶಿಕ್ಷಣ ಕೇವಲ ಸರ್ಟಿಫಿಕೇಟ್‍ಗೆ ಮಾತ್ರ ಸೀಮಿತವಾಗದೇ, ಬದುಕಿಗಾಗಿ, ಜೀವನ ನಿರ್ವಹಣೆಯ ಶಿಕ್ಷಣವಾಗಬೇಕು, ಮಕ್ಕಳಿಗಾಗಿ ಇರುವ ಪ್ರಮುಖ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಬಾಗವಹಿಸುವ ಹಕ್ಕು ಮತ್ತು ವಿಕಾಸ ಹೊಂದುವ ಹಕ್ಕು ಇವುಗಳನ್ನು ಕಡ್ಡಾಯವಾಗಿ ಮಕ್ಕಳಿಗೆ ನೀಡುವುದರೊಂದಿಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

          ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಾನ್ಯಾಸಕರಾದ ಶ್ರೀ ಸಿ.ಬಿ. ಗುಡ್ಡೇರ ರವರು ವಹಿಸಿದ್ದರು, ಸಂಪನ್ಮೂಲ ವ್ಯಕ್ತಿಯಾಗಿ ಪೊಲೀಸ್ ಇನ್ಸ್‍ಪೆಕ್ಟರ್ ಆದ ಶ್ರೀ ಕೆ.ಆರ್.ಗೋವಿಂದಪ್ಪರವರು ಆಗಮಿಸಿದ್ದರು, ಮಕ್ಕಳ ಸಹಾಯವಾಣಿಯ ಕೇಂದ್ರ ಸಂಯೋಜಕರಾದ ಶಿವರಾಜ ವಿ.ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾಲೇಜಿನ ಸಿಬ್ಬಂದಿ ಮತ್ತು ಉಪಸ್ಥಿತರಿದ್ದರು, ವಿಷ್ಣು ಗೌಡ್ ಸ್ವಾಗತಿಸಿದರೆ ಹೇಮಪ್ಪ ನಿರೂಪಿಸಿ ಶೃತಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap