ಬೆಂಗಳೂರು
ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು,ಹಾಲಿ ಸಂಸದರಿಗೆ ಕೆಲವು ರಾಜ್ಯ ನಾಯಕರ ವಿರೋಧದ ನಡುವೆಯೂ ಹಸಿರು ನಿಶಾನೆ ತೋರಿಸಿದೆ.
ಮಂಗಳವಾರ ತಡರಾತ್ರಿವರೆಗೂ ದೆಹಲಿಯಲ್ಲಿ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಮಂಡ್ಯವನ್ನು ಹೊರತುಪಡಿಸಿ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನ ಫೈನಲ್ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ನಿಲ್ಲಿಸುವ ಬಗ್ಗೆ ಅಥವಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‍ಗೆ ಬೆಂಬಲ ನೀಡುವ ಬಗ್ಗೆ ಅಂತಿಮ ನಿರ್ಧಾರ ತಗೆದುಕೊಳ್ಳಲಾಗಿಲ್ಲ ಎಂದು ಹೇಳಲಾಗುತ್ತಿದೆ.
ತುಮಕೂರಲ್ಲಿ ಒಂದೊಮ್ಮೆ ಮಾಜಿ ಪ್ರಧಾನಿ ದೇವೇಗೌಡರೇ ಸ್ಪರ್ಧೆ ಮಾಡುವುದಾದರೆ ಬಿಜೆಪಿ ತನ್ನ ಅಭ್ಯರ್ಥಿ ಬದಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಚಿತ್ರದುರ್ಗದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ್‍ಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಅಂತಿಮವಾಗಿ ಮಾಜಿ ಸಚಿವ ನಾರಾಯಣ ಸ್ವಾಮಿಗೆ ಟಿಕೆಟ್ ಕೊಡುವ ನಿರ್ಧಾರ ತಗೆದುಕೊಳ್ಳಲಾಗಿದೆ. ಕಾಂಗ್ರೆಸ್ ತೊರೆದು ಬಂದ ಶಾಸಕ ಡಾ. ಉಮೇಶ್‍ಜಾಧವ್‍ಗೆ ಕಲಬುರಗಿಯಲ್ಲಿ, ಮಾಜಿ ಸಚಿವ ಎ.ಮಂಜುಗೆ ಹಾಸನದಲ್ಲಿ ಮಣೆ ಹಾಕಲಾಗಿದೆ.
ಬಿಜೆಪಿ ಸಂಭವ್ಯ ಅಭ್ಯರ್ಥಿಗಳ ಪಟ್ಟಿ
“ಬೆಂಗಳೂರು ಉತ್ತರ – ಡಿ.ವಿ.ಸದಾನಂದ ಗೌಡ,ಬೆಂಗಳೂರು ದಕ್ಷಿಣ – ತೇಜಸ್ವಿನಿ ಅನಂತಕುಮಾರ್,ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್,ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್/ ಅವರ ಪುತ್ರಿ,ಚಿಕ್ಕಬಳ್ಳಾಪುರ – ಬಿ.ಎನ್. ಬಚ್ಚೇಗೌಡ, ಮಂಡ್ಯ – ಅಶ್ವತ್ಥ ನಾರಾಯಣ,ಕೋಲಾರ – ಡಿ.ಎಸ್.ವೀರಯ್ಯ,ತುಮಕೂರು – ಜಿ.ಎಸ್.ಬಸವರಾಜು ,ಚಿತ್ರದುರ್ಗ – ಎ.ನಾರಾಯಣ ಸ್ವಾಮಿ,ದಾವಣಗೆರೆ – ಜಿ.ಎಂ.ಸಿದ್ದೇಶ್ವರ್,ಹಾವೇರಿ – ಶಿವಕುಮಾರ ಉದಾಸಿ,ಹುಬ್ಬಳ್ಳಿ – ಧಾರವಾಡ – ಪ್ರಹ್ಲಾದ್ ಜೋಷಿ,ಬೆಳಗಾವಿ – ಸುರೇಶ ಅಂಗಡಿ,ಚಿಕ್ಕೋಡಿ – ರಮೇಶ್ ಕತ್ತಿ,,ಉತ್ತರ ಕನ್ನಡ – ಅನಂತಕುಮಾರ್‍ಹೆಗಡೆ,ಶಿವಮೊಗ್ಗ – ಬಿ.ವೈ.ರಾಘವೇಂದ್ರ,ದಕ್ಷಿಣ ಕನ್ನಡ – ನಳೀನ್ ಕುಮಾರ್ ಕಟೀಲು,ಉಡುಪಿ- ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ,ಹಾಸನ – ಎ.ಮಂಜು,ಮೈಸೂರು – ಕೊಡಗು – ಪ್ರತಾಪ್ ಸಿಂಹ,ಚಾಮರಾಜನಗರ – ವಿ.ಶ್ರೀನಿವಾಸ್ ಪ್ರಸಾದ್,ಬಿಜಾಪುರ – ರಮೇಶ್ ಜಿಗಜಿಣಗಿ,ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್,ಕೊಪ್ಪಳ – ಸಂಗಣ್ಣ ಕರಡಿ ,ರಾಯಚೂರು – ಅಮರೇಶ ನಾಯಕ್,ಬೀದರ್ – ಭಗವಂತ ಖೂಬಾ,ಬಳ್ಳಾರಿ – ದೇವೇಂದ್ರಪ್ಪ.ಕಲಬುರಗಿ – ಉಮೇಶ್ ಜಾಧವ್”
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








