ಪ್ರಥಮ ದಿನ: 9ಕೇಂದ್ರ 2588 ವಿದ್ಯಾರ್ಥಿಗಳು : 97 ವಿದ್ಯಾರ್ಥಿಗಳು ಗೈರು

ಹಗರಿಬೊಮ್ಮನಹಳ್ಳಿ:

       2018-19ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಗುರುವಾರ 21ರಿಂದ ಆರಂಭವಾಯಿತು. ತಾಲೂಕಿನಲ್ಲಿ 9ಕೇಂದ್ರಗಳಲ್ಲಿ 2588 ವಿದ್ಯಾರ್ಥಿಗಳಲ್ಲಿ 97 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಶೇಖರಪ್ಪ ಹೊರಪೇಟೆ ಪತ್ರಿಕೆಗೆ ಮಾಹಿತಿ ನೀಡಿದರು.

      ತಾಲೂಕಿನ 9ಕೇಂದ್ರಗಳಲ್ಲಿ ಹಂಪಸಾಗರ ಹೊಸಕೇಂದ್ರವಾಗಿದ್ದು, ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್, ರೇಣುಕಾ ಸಂಸ್ಥೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ವರಲಹಳ್ಳಿ, ವಲ್ಲಾಭಾಪುರ, ಬ್ಯಾಸಗಿದೇರಿ, ತಂಬ್ರಹಳ್ಳಿ, ಮೋರಗೇರಿ ಪರೀಕ್ಷಾ ಕೇಂದ್ರಗಳಾಗಿದ್ದು, ಪ್ರಥಮ ದಿನ ಪ್ರಥಮ ಪತ್ರಿಕೆ ಶಾಂತ ರೀತಿಯಿಂದ ನಡೆಯಿತು. ಕೇಂದ್ರಗಳಿಂದ ನೂರು ಮೀಟರ್ ದೂರದಲ್ಲಿ ಸಾರ್ವಜನಿಕರು, ಪಾಲಕರು ಬರದಂತೆ ಪೊಲೀಸರ ಸಹಕಾರದಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.

       ಕೊಪ್ಪಳದ ಡಯಾಟ್‍ನಿಂದ ರೇಖಾ ಎನ್ನುವವರು ವೀಕ್ಷಕರಾಗಿ ಆಗಮಿಸಿದ್ದರು. ಅಲ್ಲದೆ, ಏಳು ಇಲಾಖೆಗಳ ಅಧಿಕಾರಿಗಳು ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಫೆ.21ರಿಂದ ಏ.4ರವರೆಗೆ ಪರೀಕ್ಷೆಗಳು ಜರುಗಲಿವೆ ಎಂದು ತಿಳಿಸಿದರು.ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮುಸ್ತಾಕ್ ಅಹ್ಮದ್ ಪತ್ರಿಕೆಯೊಂದಿಗೆ ಮಾತನಾಡಿ, 2588 ವಿದ್ಯಾರ್ಥಿಗಳಲ್ಲಿ 1317 ವಿದ್ಯಾರ್ಥಿಗಳಲ್ಲಿ 41 ಗೈರು, 1271 ವಿದ್ಯಾರ್ಥಿನಿಯರಲ್ಲಿ 56ಗೈರು ಹಾಜರಿ ಆಗುವ ಮೂಲಕ ಒಟ್ಟು 97 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ ಎಂದು ತಿಳಿಸಿದರು.

      ಅಲ್ಲದೆ, ತಾಲೂಕಿನೆಲ್ಲೆಡೆ ಪ್ರಥಮ ಭಾಷೆಯಾಗಿ ಕನ್ನಡ ಪರೀಕ್ಷೆ ನಡೆದರೆ, ಆದರ್ಶ ಶಾಲೆ ಮತ್ತು ಕ್ರಿಸ್ತಶರಣ ವಿದ್ಯಾಪೀಠ ಶಾಲೆಗಳ ವಿದ್ಯಾರ್ಥಿಗಳು ಮಾತ್ರ ಪ್ರಥಮ ಭಾಷೆ ಇಂಗ್ಲೀಷ್ ಪರೀಕ್ಷೆ ಬರೆದರು ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link