ಬಳ್ಳಾರಿ
ನಗರದ ಮೋಕಾ ರಸ್ತೆಯಲ್ಲಿ ಬರುವ ಎಂಬಿಎಸ್ ಎಲ್ ಪ್ರೌಢಶಾಲೆ ಪಕ್ಕದ ರಸ್ತೆಯಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ 17ನೇ ಬ್ಯಾಚ್ ಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ಈ ಶಿಬಿರದಲ್ಲಿ ಬೇರೆ, ಬೇರೆ ಜಿಲ್ಲೆಯಿಂದ ಸುಮಾರು 40ಕ್ಕೂ ಹೆಚ್ಚು ಅಂಗವಿಕಲರು ಪಾಲ್ಗೊಂಡಿದ್ದರು.
ಈ ಉಚಿತ ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಮೂರು ತಿಂಗಳ ತರಬೇತಿ ನೀಡಿ ಅವರಿಗೆ ವಿವಿದ ಕಂಪನಿಗಳಲ್ಲಿ ಕೆಲಸ ಕೊಡಿಸುವ ಕಾರ್ಯವನ್ನು ಈ ಸಂಸ್ಥೆ ಇಲ್ಲಿಯವರೆಗೆ ಮಾಡುತ್ತಾ ಬಂದಿದೆ. ಅದೇ ರೀತಿ ಈ ಬಾರಿಯ 17ನೇ ಬ್ಯಾಚ್‍ಗೂ ವಿದ್ಯಾರ್ಥಿಗಳಿಗೆ ಇದರ ಸೌಲತ್ತುಗಳು ಲಭಿಸಲಿವೆ.
ಈ ತರಬೇತಿಯ ಉದ್ಘಾಟನೆಯನ್ನು ಕನ್ನಡ ಚೈತನ್ಯ ವೇದಿಕೆಯ ಅಧ್ಯಕ್ಷ ಬಿ.ಎಸ್ ಪ್ರಭುಕುಮಾರ್, ಗೌರವಾಧ್ಯಕ್ಷ ಹಾಗೂ ಪತ್ರಕರ್ತರು ರಘುರಾಮ್ ಪೆಂಡಕೂರ್, ಮತ್ತು ಉದ್ಯೇಮಿ ಚಿದಂಬರ್ ರಾವ್ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಮೌನೇಶ್ ಅವರು ಅಂಗವಿಕಲರ ಮಕ್ಕಳಿಂದ ತರಬೇತಿ ಉದ್ಘಾಟನೆಯನ್ನು ನೇರೆವೆರಿಸಿದರು. ನಂತರ ಮಾತನಾಡಿದ ಪ್ರಭುಕುಮಾರ ಇಂತಹ ತರಬೇತಿಗಳಿಗೆ ನಮ್ಮ ಕನ್ನಡ ಚೈತನ್ಯವೇದಿಕೆ ಸಹಕಾರಿಯಾಗಿ ಎಲ್ಲಾ ಬೆಂಬಲವನ್ನು ನೀಡುವುದಾಗಿ ತಿಳಿಸಿದರು.
ಮಕ್ಕಳಲ್ಲಿ ಆತ್ಮಸ್ಥೈರ್ಯವಿದ್ದಲ್ಲಿ ನಾವು ಎಲ್ಲರಂತೆ ಸಮಾಜದಲ್ಲಿ ಜೀವನ ನಡೆಸಬಹುದು ಎನ್ನುವುದಕ್ಕೆ ಇಂತಹ ಸಂಸ್ಥೆಗಳಿಂದ ಇಂತಹ ಉಚಿತ ತರಬೇತಿಗಳು ಮಕ್ಕಳಿಗೆ ಫಲಕಾರಿಯಾಗಲಿವೆ ಎಂದು ನುಡಿದರು. ನಂತರ ಮಾತನಾಡಿದ ರಘುರಾಮ್ ಪೆಂಡಕೂರ್ ಮಕ್ಕಳಿಗೆ ಎಲ್ಲಾ ರೀತಿಯ ಕೌಶಲ್ಯ ತರಬೇತಿ ನೀಡುವಲ್ಲಿ ಸರಕಾರಗಳು ಎಷ್ಟೋ ಯೋಜೆನೆಗಳನ್ನು ರೂಪಿಸಿದ್ದರೂ ಇಂತಹ ಅಂಗವಿಕಲರ ಸಂಸ್ಥೆಗಳು ಉಚಿತ ಊಟ, ವಸತಿ ನೀಡುವ ಮೂಲಕ ಮೂರು ತಿಂಗಳ ಕಾಲ ನೀಡುವ ಕಂಪ್ಯೂಟರ್ ತರಬೇತಿ ಶಿಬಿರದಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಒಂದೊಂದು ಬ್ಯಾಚ್‍ನಲ್ಲಿ 30 ರಿಂದ 40 ವಿದ್ಯಾರ್ಥಿಗಳು ತರಬೇತಿ ಪಡೆದು ವಿವಿದ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಿರುವುದು ಗೊತ್ತಿರುವ ವಿಷಯವಾಗಿದ್ದರೂ ಅಭಿವೃದ್ದಿಯತ್ತ ಸಮರ್ಥನಂ ಎನ್ನುವ ನಿಟ್ಟಿನಲ್ಲಿ ಈ 17ನೇ ಬ್ಯಾಚ್‍ನಲ್ಲಿ 40ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಸಂತೋಷದ ಸಂಘತಿಯಾಗಿದೆ.
ಇದರಲ್ಲಿ ಈ ಬಾರಿ ವಿವಿದ ಜಿಲ್ಲೆಗಳಿಂದ ಅಂಗವಿಕಲ ಮಕ್ಕಳು ಭಾಗವಹಿಸಿರುವುದು ಒಂದು ವಿಶೇಷವಾಗಿದೆ ಎಂದರು. ನಂತರ ತರಬ್ಭೆತಿಯ ಪೂರ್ಣ ವಿವರದ ಮಾಹಿತಿಯನ್ನು ಸಂಸ್ಥೆಯ ಮುಖ್ಯಸ್ಥರಾದ ಮೌನೇಶ್ ಅವರು ಸಂಸ್ಥೆಯಿಂದ ನಿಡಲ್ಪಡುವ ಪಟ್ಟೆ ಪುಸ್ತಕಗಳ ಕಿಟ್‍ನ್ನು ಮಕ್ಕಳಿಗೆ ನೀಡಿದರು. ಈ ಸಂದರ್ಭದಲ್ಲಿ ಗೌತಮಿಯವರು ಕಾರ್ಯಕ್ರಮದ ನಿರುಪಣೆಯನ್ನು ಮಾಡಿದರು. ರಾಧಿಕಾರಾಣಿಯವರು ವಂದಾನರ್ಪಣೆ ಮಾಡಿದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
