ಹಿರಿಯೂರು
ತಾಲ್ಲೂಕಿನಲ್ಲಿ ಒಟ್ಟು 2,33,761 ಜನ ಮತದಾರರಿದ್ದು ಅದರಲ್ಲಿ 1,16,720 ಜನ ಪುರುಷ ಮತದಾರರು ಹಾಗೂ 1,17,009 ಜನ ಮಹಿಳಾ ಮತದಾರರಿದ್ದು, ಈ ಬಾರಿ ವಿಶೇಷ ಅಂದೋಲನದ ಮೂಲಕ 2380 ಜನ ನೂತನ ಮತದಾರರನ್ನು ಸೇರ್ಪಡೆ ಮಾಡಲಾಗಿದೆ.ಅಲ್ಲದೆ ಅವರುಗಳಿಗೆ ಗುರುತಿನ ಚೀಟಿ ಸಹ ನೀಡಲಾಗಿದೆ. ಎಂಬುದಾಗಿ ಸಹಾಯಕ ಚುನಾವಣಾ ಅಧಿಕಾರಿಗಳಾದ ಚನ್ನಬಸಪ್ಪಕೊಡ್ಲಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಪತ್ರಿಕಾಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಒಟ್ಟು 285 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ನಗರಪ್ರದೇಶದಲ್ಲಿ 53 ಮತಗಟ್ಟೆಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 232 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಸೂಕ್ಷ್ಮ 66, ಅತಿ ಸೂಕ್ಷ್ಮ 69, ಸಾಮಾನ್ಯ 149 ಮತಗಟ್ಟೆಗಳು ಎಂಬುದಾಗಿ ಗುರುತಿಸಲಾಗಿದೆ ಎಂದರು.
ಈ ಕ್ಷೇತ್ರದಲ್ಲಿ ಒಟ್ಟು 2028 ವಿಕಲಚೇತನ ಮತದಾರರಿದ್ದು, ಅವರುಗಳು ಸಹ ತಪ್ಪದೇ ಮತದಾನ ಪ್ರಕ್ರಿಯೆಯಲ್ಲ ಭಾಗವಹಿಸಲು ಅನುಕೂಲವಾಗುವಂತೆ ಪ್ರತಿಮತಗಟ್ಟೆಗೆ ಆರೋಗ್ಯ ಸಹಾಯಕರನ್ನು ಹಾಗೂ ಆಶಾಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಅಲ್ಲದೆ ಪ್ರತಿಮತಗಟ್ಟೆಗಳಲ್ಲಿ ವೀಲ್‍ಚೇರ್ಸಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ಮತದಾರ ಮತದಾನದಿಂದ ಹೊರಗುಳಿಯದಂತೆ ಮತದಾನದಿಂದ ವಂಚಿತರಾಗದಂತೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂಬುದಾಗಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಸಂಬಂದಿಸಿದಂತೆ 1950 ಟೊಲ್‍ಫ್ರೀ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. ನಗರದ ರಂಜಿತ್‍ಹೋಟೆಲ್, ತಾಲ್ಲೂಕಿನ ಗಡಿಭಾಗಗಳಾದ ಗೊಲ್ಲಹಳ್ಳಿ, ವಿ.ವಿ.ಪುರ, ಬಿದರೆಕೆರೆಕ್ರಾಸ್, ಇಕ್ಕನೂರು, ರಂಗೇನಹಳ್ಳಿ, ಪಿಡಿಕೋಟೆಯಂತಹ ಪ್ರಮುಖ ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದರು.
ನಗರಪ್ರದೇಶ ಹಾಗೂ ಗ್ರಾಮೀಣಪ್ರದೇಶ ಸೇರಿದಂತೆ 5ಪ್ಲೇಯಿಂಗ್‍ಸ್ಕ್ವಾಡ್‍ಗಳನ್ನು ನೇಮಿಸಲಾಗಿದೆ. ನಗರ ಚುನಾವಣಾ ಕಛೇರಿಗೆ ಸಂಬಂದಿಸಿದಂತೆ 08193-263091 ಸಹಾಯವಾಣಿ ಸ್ಥಾಪಿಸಲಾಗಿದ್ದು ಮತದಾರರು ಕರೆಮಾಡಿ 24/7 ಯಾವುದೇ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದವರು ತಿಳಿಸಿದರು.
ಚುನಾವಣಾಜಾಗೃತಿ ಕಾರ್ಯಕ್ರಮಕ್ಕೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳನ್ನು ನೋಡಲ್ ಅಫೀಸರ್ ಆಗಿ ನೇಮಕ ಮಾಡಲಾಗಿದ್ದು. ಮತಗಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತ ಇವರುಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಮತಗಟ್ಟೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಸೇಂಟ್ ಆನ್ಸ್ ಸ್ಕೂಲ್ ಆಯ್ಕೆ ಮಾಡಿಕೊಳ್ಳಲಾಗಿದೆ. ಚುನಾವಣಾ ಮಾದರಿ ನೀತಿಸಂಹಿತೆ ಅಧಿಕಾರಿಗಳಾಗಿ ಗ್ರಾಮೀಣ ಪ್ರದೇಶದಲ್ಲಿ ತಾ.ಪಂ. ಕಾರ್ಯನಿರ್ವಹಾಣಾಧಿಕಾರಿ, ನಗರಪ್ರದೇಶದಲ್ಲಿ ನಗರಸಭೆ ಪೌರಾಯುಕ್ತರನ್ನು ಉಸ್ತುವಾರಿಗೆ ನೇಮಿಸಲಾಗಿದೆ. ಈ ನಿಟ್ಟಿನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಸಹಕಾರವಿರಲಿ ಎಂಬುದಾಗಿ ಅವರು ಮನವಿ ಮಾಡಿದರು.ಈ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ತಹಶೀಲ್ದಾರ್ ನಫೀಜಾಬೇಗಂ, ಚುನಾವಣಾ ಶಿರಸ್ತೇದಾರ್ ಸುರೇಶ್, ಸಭೆ ಆಯೋಜಕರಾದ ಶಿವಪ್ರಸಾದ್, ಸೇರಿದಂತೆ ಇತರರು ಉಪಸ್ಥಿತರಿದ್ದರು.