ಹಗರಿಬೊಮ್ಮನಹಳ್ಳಿ:
ಕುಂದುಗೋಳ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ, ಸಾರ್ವಜನಿಕರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಸಚಿವರು ಇದ್ದಕ್ಕಿದಂತೆ ಹೃದಯಘಾತವಾಗಿ ನಿಧನರಾಗಿದ್ದು, ಇಂತಹ ಅಘಾತಕಾರಿ ವಿಷಯದಿಂದ ಅವರ ಕುಟುಂಬ ಸಹಿಸಿಕೊಳ್ಳುವಂತ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಶಾಸಕ ಎಸ್.ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಮ್ಮ ಸಾರ್ವಜನಿಕ ಸಂಪರ್ಕ ಕೇಂದ್ರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಚಿವ ಸಿ.ಎಸ್.ಶಿವಳ್ಳಿಯವರ ನಿಧನಕ್ಕೆ ಸಂತಾಪಸೂಚಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕುಸಿದು ಬಿದ್ದ ಕಟ್ಟಡಗಳ ಕೆಳಗಿರುವ ಅವಶೇಷಗಳು ಮತ್ತು ಗಾಯಗೊಂಡವರನ್ನು ರಕ್ಷಣಾಕಾರ್ಯದಲ್ಲಿ ಮುತುವರ್ಜಿವಹಿಸಿ, ಅತ್ಯಂತ ಪ್ರಮಾಣಿಕ ಕಾಳಜಿಯಿಂದ ಕಾರ್ಯಚರಣೆಯಲ್ಲಿ ತೊಡಗಿದವರೊಂದಿಗೆ ಪಾಲ್ಗೊಂಡು ಜನರ ನೋವಿನೊಂದಿಗೆ ಸ್ಪಂದಿಸುತ್ತಿದ್ದ ಸಮಯದಲ್ಲಿ ಇಂತಹ ಘಟನೆ ಜರುಗಿದ್ದು ಬೇಸರದ ವಿಷಯವೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಅಲ್ಪಸಂಖ್ಯಾತರ ಅಧ್ಯಕ್ಷ ನೂರ್‍ಸಾಬ್, ಪುರಸಭೆಯ ಸದಸ್ಯರಾದ ಟಿ.ರಾಘವೇಂದ್ರ, ಜೋಗಿ ಹನುಮಂತು, ಹುಡೇದ್ ಗುರುಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಅಳವುಂಡಿ ವೀರಣ್ಣ, ಮಾಲವಿ ಗ್ರಾ.ಪಂ.ಉಪಾಧ್ಯಕ್ಷ ಚನ್ನಬಸವರಾಜ್, ಟಿಪ್ಪುಸುಲ್ತಾನ್ ಸಂಘಟನೆಯ ಅಧ್ಯಕ್ಷ ಸೈಯದ್ ಇರ್ಫಾನ್, ಮುಖಂಡರಾದ ಹಾಲ್ದಾಳ್ ವಿಜಯಕುಮಾರ್, ಮೈಲಾರಪ್ಪ, ಬಾಬು, ಅಂಬಣ್ಣ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








