ಬೆಂಗಳೂರು
ಒರಿಸ್ಸಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಖಾಸಗಿ ಬಸ್ ಚಾಲಕನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 7 ಲಕ್ಷ ರೂ. ಮೌಲ್ಯದ 15 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಒರಿಸ್ಸಾದ ಗಜಪತಿ ಜಿಲ್ಲೆಯ ರಾಮಗಿರಿಯ ಮೂಲದ ಎಸ್ರಾ ಮಾಲಿ (49) ಬಂಧಿತ ಆರೋಪಿಯಾಗಿದ್ದಾನೆ.ಬಂಧಿತನಿಂದ 7 ಲಕ್ಷ ರೂ.ಮೌಲ್ಯದ 15 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಮಂಡ್ಯದ ಮಳವಳ್ಳಿಯಲ್ಲಿ ವಾಸಿಸುತ್ತಿದ್ದ ಆರೋಪಿಯು ಖಾಸಗಿ ಬಸ್ ಚಾಲಕನಾಗಿದ್ದು ಒರಿಸ್ಸಾದಲ್ಲಿ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ರೈಲು ಇಲ್ಲವೇ ಬಸ್ಗಳಲ್ಲಿ ಸಾಗಿಸಿಕೊಂಡು ಬರುತ್ತಿದ್ದ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಆರೋಪಿಯು 30 ವರ್ಷಗಳಿಂದ ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಬಸ್ನಲ್ಲಿ ಸಂಚರಿಸುತ್ತ ಒರಿಸ್ಸಾದಿಂದ ಕಡಿಮೆ ಬೆಲೆಗೆ ತಂದಿದ್ದ ಗಾಂಜಾವನ್ನು ಖಾಸಗಿ ಬಸ್ ಚಾಲಕನಾಗಿ ಸಂಚರಿಸುವ ಸ್ಥಳಗಳಲ್ಲಿ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಕಾಡುಗೋಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡಿದ್ದ ಗಾಂಜಾ ಖರೀದಿಸಿದ್ದ ಗಿರಾಕಿಯೊಬ್ಬರು ನೀಡಿದ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಟ್ಕಾ ಜೂಜಾಟ
ಮಟ್ಕಾ ದಂಧೆ ನಡೆಸುತ್ತಿದ್ದ ಕುರುಬರಹಳ್ಳಿಯ ಕುಮಾರ್ (40) ಎಂಬಾತನನ್ನು ಬಂಧಿಸಿ, 27 ಸಾವಿರ ರೂ. ನಗದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ವಿವೇಕ್ ನಗರದ ಈಜಿಪುರ ಮುಖ್ಯರಸ್ತೆಯ ಸಂಜೀತ್ ಕ್ಲಿನಿಕ್ ಬಳಿ ಸಾರ್ವಜನಿಕರಿಂದ 10 ರೂ. ಗಳಿಗೆ 80 ರೂ. ಕೊಡುವುದಾಗಿ ನಂಬಿಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ.ಆರೋಪಿಯನ್ನು ಬಂಧಿಸಿ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








