ವಿಶಿಷ್ಠ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿರುವ ಗೋಕರ್ಣದ ಹೋಟಲ್..!!

ಕಾರವಾರ:

 

         ಚುನಾವಣಾ ಆಯೋಗ ಮತದಾನ ಜಾಗೃತಿ ಕಾರ್ಯಕ್ರಮಗಳಿಗಾಗಿ ಕೋಟಿಗಟ್ಟಲೇ ಖರ್ಚು ಮಾಡುತ್ತದೆ ಇದರ ಹೊರತಾಗಿಯೂ ಬಹಳಷ್ಟು ಜನ ಮತದಾನದ ದಿನ ರಜೆ ಇದೆ ಎಂದು ಮತದಾನ ಮಾಡದೇ ಪ್ರವಾಸಕ್ಕೆ ತೆರಳೋದು ಇಲ್ಲವೇ ಮನೆಯಲ್ಲೇ ಇರುತ್ತಾರೆ ಇಂತವರಿಗಾಗಿ ಗೋಕರ್ಣದ ಪೈ ಹೋಟೆಲ್ ನ ಮಾಲೀಕರು ತಮ್ಮ ಹೋಟೆಲ್ ನಲ್ಲಿ ಮತದಾನ ಮಾಡದೆ ಬರುವ ಪ್ರವಾಸಿಗರಿಗೆ ಯಾವದೇ ರೀತಿಯ ಉಪಹಾರ ನೀಡುವುದಿಲ್ಲ ಎಂದು ಬೋರ್ಡ್ ಹಾಕುವ ಮೂಲಕ ಮತದಾನದ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

 

 

    ಪ್ರವಾಸಿಗರ ನೆಚ್ಚಿನ ತಾಣವಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿದ್ದರೂ ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಜನರಷ್ಟೇ ಅಲ್ಲದೆ ಇಲ್ಲಿನ ಪ್ರಸಿದ್ಧ ಓಂ ಬೀಚ್, ಕುಡ್ಲೆ ಬೀಚ್‍ಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಹೀಗಾಗಿ ರಜೆ ದಿನದಲ್ಲಿ ಈ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. 

        ನಮ್ಮ ರಾಜ್ಯದಲ್ಲಿ ಏ.18 ಹಾಗು 23 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ರಜೆ ಇದ್ದು ಆ ದಿನ ಬಹಳಷ್ಟು ಜನರು ಮೋಜು ಮಸ್ತಿಗಾಗಿ ಗೋಕರ್ಣಕ್ಕೆ ಬರುತ್ತಾರೆ. ಹೀಗಾಗಿ ಇದನ್ನು ಮನಗಂಡ ಹೋಟೆಲ್‍ನವರು ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದು, ಮತದಾನದ ದಿನ ಮತದಾನ ಮಾಡದೇ ಬರುವ ಪ್ರವಾಸಿಗರಿಗೆ ಯಾವುದೇ ಊಟ, ಉಪಹಾರ ನೀಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ .

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link