ಬೆಂಗಳೂರು:
ಕಾಂಗ್ರೆಸ್ ಚುನಾವಣಾ ಪ್ರಚಾರ ಸಿದ್ದತಾ ಕಾರ್ಯಾಗಾರ ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆಯಿತು.ಕಾಂಗ್ರೆಸ್ ಪ್ರಚಾರ ಸಮಿತಿಅಧ್ಯಕ್ಷಎಚ್ ಕೆ ಪಾಟೀಲ್ ನೇತೃತ್ವದಲ್ಲಿಕಾರ್ಯಾಗಾರ ನಡೆಯುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುವುದು ಹೇಗೆ. ಮತದಾರರನ್ನು ಕಾಂಗ್ರೆಸ್ ಮತ್ತುಜೆಡಿಎಸ್ ಗೆ ಮತ ಹಾಕುವಂತೆ ಮನವೊಲಿಸುವುದು ಹೇಗೆ. ಚುನಾವಣೆಯ ಹಲವಾರು ಸಿದ್ದತೆಗಳ ಬಗ್ಗೆ ಸಮಾಲೊಚನೆ ನಡೆಸಲಾಯಿತು.
ಸುಳ್ಳಿನಿಂದ ಸತ್ಯ ಮರೆಮಾಚುವ ಕಾರ್ಯ ಆಗುತ್ತಿದೆ: ಕಳೆದ ಏಳೆಂಟು ವರ್ಷಗಳ ಈಚೆ ದೇಶದಲ್ಲಿ ಸುಳ್ಳನ್ನು ಬಳಸಿಕೊಂಡು ಸತ್ಯವನ್ನು ಮರೆ ಮಾಚುವ ಕಾರ್ಯ ಆಗುತ್ತಿದೆ. ಬಿಜೆಪಿ ಇದನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಸಾಗಿದೆ. ಅಪಪ್ರಚಾರ ಸುಳ್ಳು ನಾಯಕರ ತೇಜೋವಧೆಗೆ ಬಿಜೆಪಿ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದೆ. ಈ ಮೂಲಕ ಮುಗ್ಧ ಜನರನ್ನು ಅದರಲ್ಲೂ ಮುಗ್ದ ಯುವಕರನ್ನು ವಂಚಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಬಿಜೆಪಿಯವರು ಮಾಡುತ್ತಿರುವ ಸುಳ್ಳು ಪ್ರಚಾರ ಹಾಗೂ ಹೆಚ್ಚಾಗಿ ಆಕರ್ಷಿಸುತ್ತಿದೆಯುವ ಸಮುದಾಯ ಈ ಆಕರ್ಷಣೆಗೆ ವಿಷಾದ ವ್ಯಕ್ತಪಡಿಸಿದರು.
ಬಿಜೆಪಿಯ ಸುಳ್ಳು ಪ್ರಚಾರ ಹಾಗೂ ನಮ್ಮ ನಾಯಕರ ವಿರುದ್ಧ ನಡೆಯುತ್ತಿರುವ ತೇಜೋವಧೆಯನ್ನು ನಾವು ತಡೆಯುವಕಾರ್ಯ ಮಾಡಲೇ ಬೇಕಾಗಿದೆ. ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಲ್ಲಿ ಜನರಿಗಾಗಿ ಏನು ಮಾಡಿದೆ ಎಂಬುದನ್ನು ನಾವು ಸಮರ್ಥವಾಗಿ ವಿವರಿಸುವ ಕಾರ್ಯ ಮಾಡಬೇಕಿದೆ. ವಂದೇ ಮಾತರಮ್ ತಮ್ಮ ಸ್ವತು ್ತಎನ್ನುವರೀತಿ ಬಿಜೆಪಿಯವರು ಬಳಸಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ ಸಂದರ್ಭ ಬ್ರಿಟಿಷರಗುಂಡಿಗೆ ಎದೆಕೊಟ್ಟು ಹೋರಾಡಿದ ಕಾಂಗ್ರೆಸ್ಸಿಗರ ಮಾಡಿಕೊಳ್ಳಲಾಗುತ್ತಿದೆ. ಇದೆಲ್ಲಕ್ಕೂ ನಾವು ತಕ್ಕಉತ್ತರ ನೀಡಬೇಕುಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








