ಬಳ್ಳಾರಿ
ತಮ್ಮ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟು ಪ್ರಯತ್ನಿಸುವ ಪಾಲಕ-ಪೋಷಕರಿಗೆ ಕಡ್ಡಾಯವಾಗಿ ಮತದಾನ ಮಾಡುವ ನಿಟ್ಟಿನಲ್ಲಿ ತಿಳಿಹೇಳಿ ಮತ್ತು ಮನೆಯ ಸುತ್ತಮುತ್ತಲಿನವರಿಗೆ ಮತದಾನದ ಮಹತ್ವ ಕುರಿತು ತಿಳಿಸಿ ಮತದಾನ ಮಾಡಲು ಪ್ರೇರೆಪಿಸಿ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ ಅವರು ಹೇಳಿದರು.
ಲೋಕಸಭಾ ಚುನಾವಣೆ-2019ರ ಹಿನ್ನೆಲೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ನಗರದ ಕೋಟೆ ಪ್ರದೇಶದಲ್ಲಿರುವ ಶ್ರೀಮೇಧಾ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾವು ತಮ್ಮ ಪಾಲಕ-ಪೋಷಕರಿಗೆ ಮತದಾನದ ಮಹತ್ವದ ಕುರಿತು ತಿಳಿಹೇಳಿದರೇ ನಿರ್ಲಕ್ಷ್ಯವಹಿಸದೇ ಮತದಾನ ಮಾಡುತ್ತಾರೆ. ಆದ ಕಾರಣ ಅವರಿಗೆ ಅರಿವು ಮೂಡಿಸಿ, 18 ವರ್ಷ ತುಂಬಿದ ಎಲ್ಲರಿಗೂ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಅತ್ಯಂತ ವಿವೇಚನಾಯುಕ್ತವಾಗಿ ಯೋಗ್ಯ ಅಭ್ಯರ್ಥಿಗೆ ಮತಚಲಾಯಿಸುವಂತೆ ತಿಳಿಸಿ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ಅವರು ಕಡ್ಡಾಯ ಮತದಾನ, ನೈತಿಕ ಮತದಾನಕ್ಕೆ ಒತ್ತು ಕೊಡುವ ಹಾಗೂ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಬೇಕು ಎಂಬ ಸದುದ್ದೇಶದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸ್ವೀಪ್ ಅಡಿ ಅಯೋಜಿಸಲಾಗುತ್ತಿದೆ ಎಂದರು.ಶ್ರೀಮೇಧಾ ಕಾಲೇಜಿನ ಪ್ರಾಂಶುಪಾಲ ರಾಮ್‍ಕಿರಣ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ