ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ..!!

ಹಾವೇರಿ:

      ಏಕತೆಯಿಂದ ಎಲ್ಲರೂ ವೈಮನಸ್ಸು ಬಿಟ್ಟು, ಒಗ್ಗೂಡಿ ಕೆಲಸ ಮಾಡಿದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಈ ಹಿಂದೆ ಸಿದ್ಧರಾಮಯ್ಯನವರ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ನುಡಿದಂತೆ ನಡೆದುಕೊಂಡು ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಆ ಭರವಸೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುವದು ಎಂದು ತಿಳಿಸಿದರು.

       ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು : ಹಿರೆಕೇರೂರು ಶಾಸಕ ಬಿ.ಸಿ.ಪಾಟೀಲ ಮಾತನಾಡಿ, ಮೋದಿ ಅವರು ಐದು ವರ್ಷದ ಅಧಿಕಾರದಲ್ಲಿ ಸುಳ್ಳು ಹೇಳಿಕೊಂಡ ಬಂದಿದ್ದಾರೆ. ಸುಳ್ಳಿಗೆ ಆಯುಷ್ಯ ಬಾಳ ದಿನಾ ಇರುವುದಿಲ್ಲ. ದೇಶದ ಹಾಗೂ ಜಿಲ್ಲೆಯ ಜನರು ಜಾಗೃತಗೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೋಟ್ಟಿದ್ದಾರೆ. ಕಳೆದ ಬಾರಿ ಮೋದಿ ಅಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಬರಿ 80 ಸಾವಿರ ಮತಗಳಿಂದ ಸೋಲು ಖಂಡಿದ್ದರು. ಈ ಬಾರಿ ಮೋದಿ ಅಲೆ ಜಿಲ್ಲೆಯಲ್ಲಿ ವರ್ಕ ಆಗಲ್ಲ. ಡಿ.ಆರ್.ಪಾಟೀಲರು ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

       ಸಾಮಾಜಿಕ ಹಾಗೂ ಗ್ರಾಮಾಭೀವೃದ್ಧಿ ಹರಿಕಾರ : ಮಾಜಿ ಸಚಿವ ಮನೋಹರ್ ತಹಶೀಲ್ದಾರ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಆರ್.ಪಾಟೀಲ ಅವರು, ಒಬ್ಬ ಕಟ್ಟಾ ಗಾಂಧಿವಾದಿ. ಪಕ್ಷ ಅವರನ್ನು ಕಣಕ್ಕೆ ಇಳಿಸಿದ ದಿನದಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದಂತಾಗಿದೆ. ಅಲ್ಲದೇ, ಡಿ.ಆರ್. ಸಾಮಾಜಿಕ ಹಾಗೂ ಗ್ರಾಮಾಭೀವೃದ್ಧಿ ಹರಿಕಾರರು. ಅವರ ಗೆಲುವಿಗೆ ಕಾಂಗ್ರೆಸ್ ಒಗ್ಗಟ್ಟಿನಿಂದ ಶ್ರಮಿಸಲಿದೆ ಎಂದು ತಿಳಿಸಿದರು.

        ಬಡವರಿಗೆ ನೆರವು : ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಡಿ.ಆರ್.ಪಾಟೀಲರು ಅರಣ್ಯ ಭೂಮಿ ಹಂಚಿಕೆ, ಹಾಗೂ ಗ್ರಾಮೀಣಾಭಿವೃದ್ಧಿಯ ಬಗ್ಗೆ ಹೆಚ್ಚು ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರು ಲೋಕಸಭೆ ಆಯ್ಕೆಯಾದರೆ, ಅವರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಗ್ರಾಮೀಣಾಭಿವೃದ್ಧಿಯಲ್ಲಿ ಹೆಚ್ಚು ಕೆಲಸ ಮಾಡಿರುವ ಡಿ.ಆರ್.ಪಾಟೀಲರನ್ನು ಜನ ಬಡವರ ಬಂದು ಎಂದು ಕರೆಯುತ್ತಾರೆ ಎಂದು ತಿಳಿಸಿದರು.

       ಯಾವುದೇ ಅಸಮಾಧಾನವಿಲ್ಲ : ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ನಾನು ಹಾವೇರಿ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದೆ. ಪಕ್ಷದ ಹೈ ಕಮಾಂಡ್ ಡಿ.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ನನಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷದ ತಿರ್ಮಾನದಂತೆ ಡಿ.ಆರ್.ಪಾಟೀಲ ಅವರ ಗೆಲುವಿಗೆ ಎಲ್ಲ ರೀತಿಯಿಂದಲೂ ಶ್ರಮಿಸಲಾಗುವುದು ಎಂದು ತಿಳಿಸಿದರು.

       ಮಾಜಿ ಶಾಸಕ ಜಿ,ಎಸ್ ಗಡ್ಡದೇವರಮಠ ಮಾತನಾಡಿ, ಅಭಿವೃದ್ಧಿ ದೃಷ್ಠಿಯಿಂದ ಈ ಬಾರಿ ಚುನಾವಣೆಯಲ್ಲಿ ಡಿ.ಆರ್.ಪಾಟೀಲ ಅವರನ್ನು ಬೆಂಬಲಿಸಬೇಕು ಎಂದು ಕ್ಷೇತ್ರದ ಮತದಾರರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

       ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಮಾತನಾಡಿ, ಡಿ.ಆರ್.ಪಾಟೀಲ ಒಬ್ಬ ಶಿಸ್ತಿನ ಸಿಪಾಯಿ, ಇಂದಿರಾ ಗಾಂಧಿಯ ಕಾಲದಿಂದಲೂ ಪಕ್ಷದ ಏಳಿಗೆಗೆ ಶ್ರಮಿಸಿದ್ದಾರೆ. ಈ ಕ್ಷೇತ್ರದಲ್ಲಿ ಡಿಆರ್ ಪಾಟೀಲ ಅವರು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಮಾಜಿ ಶಾಸಕ ದೊಡ್ಡಮನಿ, ಗ್ರಾಮೀಣ ಒಕ್ಕಲತನ ಅನುಭವ ಹೊಂದಿರುವ ಡಿ.ಆರ್.ಪಾಟೀಲ ಅವರು, ಸಮಾವೇಶ ಸೇವೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರ ಜನಪರ ಕೆಲಸಗಳು ಇಂದು ಅವರ ಗೆಲುವಿಗೆ ಮೆಟ್ಟಿಲುಗಳಾಗಲಿವೆ ಎಂದು ತಿಳಿಸಿದರು.

        ಎಲ್ಲರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ದೇಶದಲ್ಲಿ ಮೋದಿ ಪ್ರಧಾನಿಯಾದ ನಂತರ ದುರಾಡಳಿತ ಹೆಚ್ಚಾಗಿ ಕಂಡು ಬರುತ್ತಿದ್ದು, ಬಡವರ ವಿರೋಧಿ ನೀತಿ ಹೊಂದಿರುವ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ದೇಶದ ಜನರು ಮುಂದಾಗಿದ್ದಾರೆ. ಸುಳ್ಳು ಹೇಳುವ ಕಾಯಕದಿಂದ ಯಾರು ಅಧಿಕಾರದಿಂದ ಇರಲು ಸಾಧ್ಯವಿಲ್ಲ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಡಿಆರ್ ಪಾಟೀಲ ಜಯಗೊಳಿಸಲು ನಾವೆಲ್ಲರೂ ಬದ್ದರಾಗಬೇಕಾಗಿದೆ. ಕಾಂಗ್ರೇಸ್ ಪಕ್ಷದ ಗೆಲುವೇ ನಮ್ಮ ಗುರಿಯಾಗಿದೆ ಈ ನಿಟ್ಟಿನಲ್ಲಿ ಕ್ಷೇತ್ರದ ಹೋದ ಕಡೆ ಜನರು ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ ಜಯಗಳಿಸಲು ಎಲ್ಲರ ಸಹಕಾರ ಮಹತ್ವ ಎಂದು ಎಚ್ ಕೆ ಪಾಟೀಲ ವಿನಂತಿಸಿಕೊಂಡರು.

        ಏ 03 ನಾಮಪತ್ರ ಸಲ್ಲಿಕೆ : ಇದಕ್ಕೂ ಮೊದಲು ಹಾವೇರಿ-ಗದಗ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ.ಹಿರೇಮಠ, ಹಾಗೂ ಜಿ.ಎಸ್.ಪಾಟೀಲ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಜವಾಬ್ದಾರಿ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ಮೂಡಿದೆ. ಏ. 3 ರಂದು ಡಿ.ಆರ್.ಪಾಟೀಲ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ, ಡಿ.ಆರ್.ಪಾಟೀಲ ಅವರಿಗೆ ಆರ್ಶಿವದಿಸಬೇಕು ಎಂದು ಕೇಳಿಕೊಂಡರು.

ಜೆಡಿಎಸ್ ಬೆಂಬಲ:

        ಜೆಡಿಎಸ್ ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ ಮಾತನಾಡಿ, ಮೈತ್ರಿ ಧರ್ಮದಂತೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿರುವ ಡಿ.ಆರ್.ಪಾಟೀಲ ಅವರ ಗೆಲುವಿಗೆ ಶ್ರಮಿಸಲಿದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಸ್.ಎಫ್.ಎನ್ ಗಾಜೀಗೌಡ್ರ, ಮಾಜಿ ನಿಗಮ ಮಂಡಳಿತ ಅಧ್ಯಕ್ಷ ಟಿ.ಈಶ್ವರ, ಜಿ.ಪಂ.ಸದಸ್ಯ ಕೆ.ಆರ್.ಬಸೇಗಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ,ಮುಖಂಡರಾದ ಸತೀಶ ದೇಶಪಾಂಡೆ, ಶ್ರೀನಿವಾಸ್ ಹಳ್ಳಳ್ಳಿ, ಶಿವಕುಮಾರ ತಾವರಗಿ,ಎಂಎಂ ಮೈದೂರ, ನಾಗಪ್ಪ ತಿಪ್ಪಕ್ಕನವರ, ಪ್ರಭುಗೌಡ ಭಿಷ್ಟನಗೌಡ್ರ, ಸೇರಿದಂತೆ ಹಾವೇರಿ ಗದಗ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link