ಶಿಗ್ಗಾವಿ :

ಇತ್ತೀಚೆಗೆ ಸುರಿದ ಭಾರಿ ಮಳೆಗೆ ನಾಗನೂರು ಕೆರೆ ಕೋಡಿ ಬಿದ್ದು ಆ ನೀರಿನ ರಬಸಕ್ಕೆ ನೂರಾರು ಎಕರೆ ಎಲೆಬಳ್ಳಿ ಸೇರಿದಂತೆ ಕೆರೆಯ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ಹಾನಿಯಾಗಿ ಜಮೀನಿನ ಒಡ್ಡುಗಳು ಹಾಳಾಗಿದ್ದರೂ ಇಲ್ಲಿಯವರೆಗೂ ದುರಸ್ಥಿ ಮಾಡಲಾಗಿಲ್ಲ, ಕೂಡಲೆ ಅದರ ಕಾಮಗಾರಿ ಕೈಗೊಳ್ಳಬೇಕು ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಜೆಡಿಎಸ್‍ನ ಶಿಗ್ಗಾವಿ ತಾಲೂಕಾದ್ಯಕ್ಷ ಈರಣ್ಣ ನವಲಗುಂದ ಸಂಭಂದಿಸಿದ ಅಧಿಕಾರಿಗಳಿಗೆ ಎಚ್ಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮುಖಂಡರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಿಜವಾದ ಅರ್ಹ ರೈತ ಫಲಾನುಭವಿಗಳಿಗೆ ಇಲ್ಲಿಯವರೆಗೂ ಪರಿಹಾರ ಸಿಕ್ಕಿಲ್ಲ ಎಲ್ಲವೂ ಉಳ್ಳವರ ಪಾಲಾಗಿದೆ, ಈಗ ಸಮೀಕ್ಷೆ ಮಾಡಿಸುವ ನೆಪ ಮಾಡಿ ಅನ್ಯಾಯವಾದ ರೈತರ ಮೂಗಿಗೆ ತುಪ್ಪ ಒರೆಸುವ ಕಾರ್ಯ ನಡೆದಿದೆ, ಕೋಟಿಗಟ್ಟಲೆ ಪರಿಹಾರ ಹಣದ ಅವ್ಯವಹಾರ ನಡೆದಿದೆ ಕೇವಲ ಸಂಭಂದಿಸಿದ ತಪ್ಪಿತಸ್ಥ ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿ ಅಮಾನತು ಆದೇಶ ನೀಡಲಾಗಿದೆ ಎಂದು ಹೇಳುವ ಅವರ ಮೇಲಾಧಿಕಾರಿಗಳು ಯಾವ ಯಾವ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂಬುದನ್ನ ಬಹಿರಂಗ ಪಡಿಸುವಲ್ಲಿ ಎಡವಿದ್ದಾರೆ, ಇದರಿಂದ ನಿಜವಾದ ಅಧಿಕಾರಿಗಳಿಗೂ ಮುಜುಗುರವಾಗಿದ್ದು ಪರಿಹಾರದ ವಿತರಣೆ ಯಲ್ಲಿ ಭಾಗಿಯಾದ ಯಾರೇ ಭಲಿಷ್ಟ ತಪ್ಪಿತಸ್ಥ ಅಧಿಕಾರಿಗಳಿರಲಿ ಅಥವಾ ಜನಪ್ರತಿನಿಧಿಯೇ ಇರಲಿ ಅವರ ಮೇಲೆ ಕೇಸ್ ಹಾಕಿ ಅಮಾನತು ಮಾಡಬೇಕು ಎಂದು ಅಗ್ರಹಿಸಿದರು.
ಸ್ಥಳೀಯ ಶಿಗ್ಗಾವಿ ಪುರಸಭೆಯಲ್ಲಿಯೂ ಸಹಿತ ಇದೇ ಕಾರ್ಯ ಮುಂದುವರೆದಿದ್ದು ವಿವಿಧ ಕರಗಳನ್ನ ಮನಸಾ ಇಚ್ಚೆ ಹೆಚ್ಚಿಸಿದ್ದಾರೆ, ನೂತನ ಮನೆಗಳ ನಿರ್ಮಾಣಕ್ಕೆ ನಿಗದಿ ಪಡಿಸಿದ ಹೊಸ ನಿಯಮಗಳು ಜನಸಾಮಾನ್ಯರಿಗೆ ಹೊರೆಯಾಗಿದ್ದು ಮೊದಲೆ ಕಷ್ಟಪಟ್ಟು ಕಟ್ಟಿಕೊಳ್ಳುವ ಮನೆಗಳಿಗಿಂತ ಅದರ ಕರಗಳೇ ಹೆಚ್ಚಾಗಿವೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಇದನ್ನ ಸಡಿಲಗೊಳಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ದರ ನಿಗದಿ ಮಾಡಬೇಕು ಎಂದರಲ್ಲದೇ ಅಗತ್ಯ ಬಿದ್ದರೆ ಹೋರಾಟ ಅನಿವಾರ್ಯ ಎಂದಿದ್ದಾರೆ.
ಸ್ಥಳೀಯ ಪುರಸಭೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಸ್ಥಳೀಯ ಸರ್ಕಾರವೆಂದೆ ಕರೆಸಿಕೊಳ್ಳುವ ಪುರಸಭೆ ಸ್ಪಂದಿಸಬೇಕೇ ವಿನಹ ಹೊರೆಯಾಗಬಾರದು, ಸಾರ್ವಜನಿಕರಿಗೆ ಸ್ಪಂದಿಸುವ ದರ ನಿಗದಿ ಮಾಡಲಿ ಎಂದು ಆಶಿಸಿದರು.ಜೆಡಿಎಸ್ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಿವಶಂಕರ ಕಲ್ಲೂರ, ಜಿಲ್ಲಾ ಶಹರ ಘಟಕದ ಅದ್ಯಕ್ಷ ಆರ್ ಬಿ ಪಾಟೀಲ, ಶಹರ ಘಟಕದ ಅದ್ಯಕ್ಷ ಸಂಜೀವ ಮಣ್ಣಣ್ಣವರ, ಕಾನೂನು ಸಲಹೆಗಾರರಾದ ಜಿ ಎನ್ ಯಲಿಗಾರ, ಮುಖಂಡರಾದ ಈಶ್ವರ ತಾರಿಹಾಳ, ಸವಿತಾ ಇಂದ್ರೇಕರ, ಸಚ್ಚಿದಾನಂದ ತಾರಿಹಾಳ, ಸಿದ್ದನಗೌಡ್ರ ಪಾಟೀಲ, ಬಸೆಟೆಪ್ಪ ಗುದ್ಲಿಶೆಟ್ಟರ, ನಾಗಪ್ಪ ಚೌಹಾಣ್, ರಾಜು ಮಾಳವಾದೆ, ಸಂಜೀವ ಇಂದೂರ, ಎಸ್ ಬಿ ಮುದ್ದಪ್ಪಗೌಡ್ರ, ಎಸ್ ಎಸ್ ಹಿರೇಮಠ, ರವಿ ಕುರಗೋಡಿ, ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
