ಎಸ್.ಯು.ಸಿ.ಐ (ಸಿ) ಪಕ್ಷದ ಕಾರ್ಯಕರ್ತರ, ಬೆಂಬಲಿಗರ ಸಭೆ

ಬಳ್ಳಾರಿ

      ಲೋಕಸಭಾಕ್ಷೇತ್ರದಿಂದ ಎಸ್.ಯು.ಸಿ.ಐ (ಸಿ) ಅಭ್ಯರ್ಥಿಯಾಗಿಕಾ.ದೇವದಾಸ್‍ಅವರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ, ನಿನ್ನೆಸಂಜೆ ವಿವಿಧ ಗ್ರಾಮಗಳು, ವಿವಿಧ ತಾಲ್ಲೂಕುಗಳಿಂದ ಬಂದ ಎಸ್.ಯು.ಸಿ.ಐ (ಸಿ) ಪಕ್ಷದಕಾರ್ಯಕರ್ತರು, ಬೆಂಬಲಿಗರ ಸಭೆಯನ್ನುಗಾಂಧಿ ಭವನದಲ್ಲಿ ನಡೆಸಲಾಯಿತು.

       ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದರಾಜ್ಯ ಸಮಿತಿಯ ಸದಸ್ಯರಾದ ಕಾ.ಸೋಮಶೇಖರ್.ಕೆ“ ಪ್ರಾಮಾಣಿಕಕಾರ್ಯಕರ್ತರು, ಬೆಂಬಲಿಗರು ನಮ್ಮ ಪಕ್ಷದ ಆಸ್ತಿಯಿದ್ದಂತೆ, ಅಷ್ಟೇ ಅಲ್ಲದೆಇಡೀ ಸಮಾಜದ ಆಸ್ತಿಯಿದ್ದಂತೆ. ಇಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುವ ಕಾರ್ಯಕರ್ತರು ಮಹಾನ್ ಮಾಕ್ರ್ಸ್‍ವಾದಿ ಚಿಂತಕರಾದ ಕಾಶಿವದಾಸ್ ಘೋಷರ ಚಿಂತನೆಗಳಿಗೆ ಆಕರ್ಷಿತರಾದವರು, ಪಕ್ಷಕಟ್ಟುತ್ತಿರುವ ನೂರಾರು ಹೋರಾಟಗಳಿಂದ ಪ್ರೇರಿತರಾದವರು.

       ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಸಾಮಾಜಿಕ ಹೋರಾಟಗಳನ್ನು ಕಟ್ಟಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ.ಚುನಾವಣೆಯನ್ನು ಸಹ ಹೋರಾಟದ ಭಾಗವಾಗಿತೆಗೆದುಕೊಂಡುಉರಿಯುವ ಬಿಸಿಲನ್ನು ಲೆಕ್ಕಿಸದೆ ಕೆಲಸಗಳನ್ನು ಮಾಡುತ್ತಿದ್ದಾರೆ.ಈ ಸ್ಪೂರ್ತಿಯನ್ನು ಕೊನೆಯವರೆಗೂ ಉಳಿಸಿಕೊಂಡು, ಜನರ ನಡುವೆ ಪ್ರಚಾರಕಾರ್ಯವನ್ನು ಬಿರುಸಾಗಿ ನಡೆಸುತ್ತಾ, ಬಂಡವಾಳಶಾಹಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‍ಗಳ ನಿಜ ಬಣ್ಣವನ್ನು ಬಯಲಿಗೆಳೆಯಬೇಕು.

       ಹಾಗೆಯೇನಮ್ಮ ವಿಚಾರಗಳನ್ನು ಹೆಚ್ಚಿನ ಸಂಖ್ಯೆಯಜನರತ್ತತೆಗೆದುಕೊಂಡು ಹೋಗಲು ನಾವೆಲ್ಲ ಸನ್ನದ್ಧರಾಗಬೇಕು. ಜಾಥಾ, ಆಟೋ ಪ್ರಚಾರ, ಮನೆ ಮನೆ ಪ್ರಚಾರ, ಸಾರ್ವಜನಿಕ ಸಭೆಗಳು, ಬೀದಿ ಬದಿಯ ಸಭೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನುತಲುಪಿ, ಜನರ ಮನಸ್ಸನ್ನಗೆಲ್ಲಬೇಕು”ಎಂದುಕರೆ ನೀಡಿದರು. ಈ ಸಭೆಯಲ್ಲಿಅಭ್ಯರ್ಥಿದೇವದಾಸ್, ಪಕ್ಷದಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಉಪಾಧ್ಯ, ಮಂಜುಳಾ, ನಾಗಲಕ್ಷ್ಮಿ, ಡಾ.ಪ್ರಮೋದ್, ಹನುಮಪ್ಪ, ಗೋವಿಂದ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link