ಗ್ರಾಮ ಪಂಚಾಯ್ತಿಯ ಮುಖ್ಯದ್ವಾರಕ್ಕೆ ಹಾಕಿದ್ದ ಬೇಲಿಯನ್ನು ತೆರವು ಗೊಳಿಸಲಾಯಿತು.

ಹರಪನಹಳ್ಳಿ

       ತಾಲ್ಲೂಕಿನ ನಂದಿಬೇವೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಗ್ರಾಮ ಪಂಚಾಯ್ತಿಗೆ ಮಂಗಳವಾರ ಬೇಲಿ ಜಡಿದ ಪರಿಣಾಮಕ್ಕೆ ಸ್ಪಂದಿಸಿದ ಅಧಿಕಾರಿಗಳು ಬುಧವಾರವೇ ನೂತನ ಕೊಳವೆ ಬಾವಿ ಕೊರೆಸಲು ಪ್ರಾರಂಭಿಸಿದನ್ನು ಸ್ವಾಗತಿಸಿದ ಗ್ರಾಮಸ್ಥರು ಬೇಲಿಯನ್ನು ತೆರವುಗೊಳಿಸಿದರು.

      ಹಲವಾರು ಬಾರಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದರೂ ಪರಿಹಾರ ದೊರಕದಿರುವುದಕ್ಕೆ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕಛೇರಿಗೆ ಮುಳ್ಳಿನ ಬೇಲಿ ಜಡಿದಿದ್ದರು. ಬುಧವಾರ ಗ್ರಾಮಸ್ಥರೊಂದಿಗೆ ಪಿಎಸ್‍ಐ ಶ್ರೀಧರ ನೇತೃತ್ವದಲ್ಲಿ ನೀರಿನ ಸಮಸ್ಯೆಗೆ ಕೂಡಲೇ ಪರಿಹಾರ ನೀಡಲಾಗುವುದು ಎಂದು ಮನ ಒಲಿಸಿ ಬೇಲಿಯನ್ನು ತೆರವುಗೊಳಿಸಲಾಯಿತು.

        ಬೊರವೆಲ್ ಗಾಡಿಯೊಂದಿಗೆ ಪಿಡಿಓ ಚನ್ನಬಸಯ್ಯ ಸ್ಥಳಕ್ಕೆ ಆಗಮಿಸಿ ನೂತನ ಕೊಳವೆ ಕೊರೆಸಲು ಪ್ರಾರಂಭಿಸಿದರು. ಇದರೊಂದಿಗೆ ಕಳೆದ ಹಲವಾರು ದಿನಗಳಿಂದ ಗ್ರಾಮದ ಜನತೆಗೆ ಖಾಸಗಿ ಬೋರ್‍ವೆಲ್ ಮಾಲೀಕರು ನೀಡಿದ್ದ ಬಾಕಿ ಬಾಡಿಗೆ ಹಣವನ್ನು ಹಣ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಎರಡು ಖಾಸಗಿ ಬೊರವೆಲ್ ಮಾಲೀಕರು ನೀರು ಕೊಡಲು ಪ್ರಾರಂಭಿಸಿದ್ದಾರೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿದೆ ಎಂದು ಗ್ರಾಮಸ್ಥರು ಹೇಳಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link