ತುಮಕೂರು:
ಸಂಸಾರದ ಜಂಜಾಟದಲ್ಲಿ ನಮ್ಮಲ್ಲಿ ಅಡಗಿರುವ ಚೈತನ್ಯ ಅರಿವಿಗೆ ಬರುವುದಿಲ್ಲ. ಈ ದೇಹವೇ ಒಂದು ಸ್ಥಾವರ. ಈ ದೇಹದಲ್ಲಿರುವ ದೈವತ್ವ ಕಾಣಲು ಸಾಧ್ಯವಿಲ್ಲ. ಯಾವುದು ಶಾಶ್ವತವಾಗಿರುವುದಿಲ್ಲವೋ ಅದು ಸ್ಥಾವರ. ಯಾವುದು ಚಲನೆಯಿಂದ ಕುಡಿರುತ್ತದೆಯೋ ಅದು ಜಂಗಮ. ಬುದ್ಧನ ಮತ್ತು ಮಾಹತ್ಮರುಗಳ ಜೀವನ ಚರಿತ್ರೆ ಅರ್ಥಮಾಡಿಕೊಂಡರೆ ಗೊತ್ತುತ್ತದೆ. ಬುದ್ಧ ಅರಿವಿನ ಸಾಕಾರಮೂರ್ತಿ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೀನಾಕ್ಷಿ ಖಂಡಿಮಠ್ ಹೇಳಿದರು.
ಅವರು ಕೃಷ್ಣಾನಗರದಲ್ಲಿರುವ ವಿದ್ಯಾವಾಹಿನಿ ಕಾಲೇಜಿನಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗ ಕಾರ್ಯಕ್ರಮದಲ್ಲಿ ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬ ವಿಷಯ ಕುರಿತು ಮಾತನಾಡಿದರು. ಎಲ್ಲಿ ಪ್ರೀತಿ ಇರುತ್ತದೆ. ಅಲ್ಲಿ ಆ ಪ್ರೀತಿಯನ್ನು ಬಿಟ್ಟರೆ ಭಯ ಇರುವುದಿಲ್ಲ. ಆಸ್ತಿ, ಸಂಪತ್ತು, ಅಂತಸ್ತು, ಎಲ್ಲವನ್ನು ಬಿಟ್ಟರೆ ಭಯ ಇರುವುದಿಲ್ಲ ಎಂದರು. ಆನೆ, ಹುಲಿ, ಸಿಂಹ, ತಿಗಣೆ, ಮನುಷ್ಯ ಎಲ್ಲಾ ಜೀವಿಗಳಿಗೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ. ಏಕೆಂದರೆ ಇದು ಚಲನೆಯಿಂದ ಕೂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಶಬ್ದ ಸ್ಥಾವರ, ಶೂನ್ಯವೂ ಸ್ಥಾವರ, ಬೆಳಕಿನಲ್ಲಿ ಬೆಳಕನ್ನು ಹುಡುಕುವುದು, ಬೆಳಕಿನಲ್ಲಿ ಬೆಳಕನ್ನು ಕೊಡುವ ಶಕ್ತಿಯೇ ಜಂಗಮ. ವಚನಕಾರರು ಬಯಲಲ್ಲಿ ನಿಭಯವನ್ನು ಶೂನ್ಯದಲ್ಲಿ ನಿಶೂನ್ಯವನ್ನು ಹುಡುಕಿದರು. ಅದೇ ರೀತಿ ಸಿದ್ದಯ್ಯ ಪುರಾಣಿಕರ ಪ್ರಕಾರ ಕಾಣುವ ಶಕ್ತಿಗೆ ಕಾಣದ ಶಕ್ತಿ ರೂಪುಗೊಳ್ಳುತ್ತದೆ. ನಾವು ಕಟ್ಟಬೇಕಾದುದ್ದನ್ನು ಕಟ್ಟುವುದಿಲ್ಲ. ಬೇಡವಾದ್ದನ್ನು ಕಟ್ಟುತ್ತೇವೆ. ಜೀವನ ನಮ್ಮ ಬದುಕು ಎಲ್ಲವೂ ಜಂಗಮವಾಗಬೇಕು ಎಂದು ತಿಳಿಸಿದರು.
ಸಾವು ಯಾರಿಗೂ ತಪ್ಪಿದ್ದಲ್ಲ. ಸಾವಿಗೆ ಭಯಪಡುವುದಕ್ಕಿಂತ ಅದನ್ನು ಪ್ರೀತಿಯಿಂದ ಕಾಣುವುದು ಉತ್ತಮ. ಸತ್ಕಾರ್ಯದಲ್ಲಿ ತೊಡಗಿಕೊಂಡಾಗ ಅದೆಷ್ಟು ಬವಣೆಗಳು ಕಡಿಮೆಯಾಗುತ್ತದೆ. ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಂಡಾಗ ಮಾತ್ರ ಸ್ಥಾವರವನ್ನು ಮೀರಿ ಚೈತನ್ಯದ ಶಕ್ತಿಯನ್ನು ಕಾಣಬಹುದೆಮದು ಹೇಳಿದರು. ನಿಜವಾದ ಚೈತನ್ಯದ ದರ್ಶನಕ್ಕೆ ಯಾವ ಜಾತಿ ಮತಗಳ ಕಟ್ಟಳೆಯಿಲ್ಲ. ಮದ, ಮತ್ಸರ, ಮೋಹ, ದ್ವೇಷ ಕಾಮನೆಗಳು ಕಳೆದಾಗ ಮಾತ್ರ ನಿಜವಾದ ಚೈತನ್ಯದ ಅರಿವಾಗುತ್ತದೆ. ವಿನಯದೊಳಗಿನ ಮೂಲವನ್ನು ಅರ್ಥಮಾಡಿಕೊಳ್ಳದ ಹೊರತು ಮುಕ್ತಿ ಇಲ್ಲ. ಬೌದ್ಧಿಕ ಕರ್ಮಗಳು ದೈನಂದಿನ ಕರ್ಮಗಳ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳಬೇಕು. ಬದುಕು ಒಂದು ತಪಸ್ಸಾದಾಗ ಮಾತ್ರ ಯೋಗವಾಗುತ್ತದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ, ಮೀನಾಕ್ಷಿ ಖಂಡಿಮಠ್ ಅವರ ಉಪನ್ಯಾಸ ಚಿಂತನಾತ್ಮಕವಾಗಿತ್ತು. ಅಲ್ಲದೆ ವೈಚಾರಿಕತೆಯ ನೆಲೆಗಟ್ಟಿನಿಂದ ಕೂಡಿತ್ತು. ಸ್ಥಾವರ ಮತ್ತು ಜಂಗಮ ನಡುವಿನ ಅಂತರದಲ್ಲಿ ಮಹತ್ವದ ಮಾಹಿತಿಗಳನ್ನು ಕೊ9ಟ್ಟಿದ್ದಾರೆ. ಲೌಕಿಕ ಪರಿಸರದಲ್ಲಿ ಇದ್ದು ಹಲವು ರೀತಿಯ ಚಿಂತನೆಗಳನ್ನು ಮಾಡುವಾಗ ಸಿಗುವುದು ಜಂಗಮ ತತ್ವ. ಜಂಗಮ ಎಂಬುದು ಅಗೋಚರ ಶಕ್ತಿಯಿಂದ ಕಣ್ಣಿಗೆ ಕಾಣಿಸುವುದಿಲ್ಲ. ಸೈರ್ಉನಿಗೆ ಬೆಳಕನ್ನು ಕೊಡುವ ಶಕ್ತಿ ಇದೆ. ಆಶಕ್ತಿ ಅದಕ್ಕೆ. ಕಾಣಿಸುವುದಿಲ್ಲ .
ಅದೇ ಜಂಗಮ ಪ್ರೀತಿ, ಪ್ರೇಮ, ವಾತ್ಸಲ್ಯ, ದ್ವೇಷ, ವಂಚನೆ, ಮೋಸ, ಇವೆಲ್ಲ ಸ್ಥಾವರ ಇವುಗಳಿಗೆ ಅಳಿವುಂಟು. ಗುಡಿ ಚರ್ಚು ಮಸೀದಿ ಇವುಗಳು ಸ್ಥಾವರ. ಕ್ರಿಯಾಶೀಲ ಶಕ್ತಿಯೇ ಜಂಗಮ. ಸ್ಥಾವರ- ದ್ವೇಷ, ಜಂಗಮ-ಶಾಂತಿ, ಸ್ವಾರ್ಥ-ಸ್ಥಾವರ, ಪ್ರೀತಿ-ಜಂಗಮ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಮೀನಾಕ್ಷಿ ಖಂಡಿಮಠ್ ಅವರನ್ನು ಜ್ಞಾನಬುತ್ತಿ ಸತ್ಸಂಗದ ಸಂಸ್ಥಾಪಕ ಪಿ.ಶಾಂತಿಲಾಲ್ ಸನ್ಮಾನಿಸಿದರು. ಸುಮನಾ ಪ್ರಾರ್ಥಿಸಿದರೆ, ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಇಂದಿರಮ್ಮ ನಿರೂಪಿಸಿದರು.