ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್ ಕಾರ್ಯಕ್ರಮ

ತುರುವೇಕೆರೆ:

        ಅಂಬೇಡ್ಕರ್ ಅವರ ಚಿಂತನೆ ಮತ್ತು ವಿಚಾರಧಾರೆಗಳು ಬ್ರಾಹ್ಮಣತ್ವವನ್ನು ವಿರೋಧಿಸಿದವೆ ಹೊರೆತು ಎಂದಿಗೂ ಕೂಡ ಬ್ರಾಹ್ಮಣರನ್ನಲ್ಲ ಎಂಬುದನ್ನ ಎಲ್ಲರೂ ಗ್ರಹಿಸ ಬೇಕಿದೆ ಎಂದು ತುಮಕೂರು ವಿಶ್ವವಿಧ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಎಂ.ಯು.ಲೋಕೇಶ್ ಅಭಿಪ್ರಾಯಪಟ್ಟರು.

        ಪಟ್ಟಣದ ಹೊರ ವಲಯದ ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಡಾ.ಎಪಿಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಜರುಗಿದ ‘ಯುವ ಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

        ಅಂಬೇಡ್ಕರ್ ಕೇವಲ ದಲಿತ ಹಾಗು ಕೆಳ ವರ್ಗಗಳ ಶ್ರಮಿಕನೆಂದು ಎಂದಿಗೂ ಭಾವಿಸಿದವರಲ್ಲ. ಇಡೀ ಇಂಡಿಯಾದ ಎಲ್ಲಾ ದಮನಿತ ಸಮುದಾಯಗಳ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಾನತೆಗಾಗಿ ವ್ಯವಸ್ಥೆಯ ವಿರುದ್ದ ಕ್ರಾಂತಿಯನ್ನೇ ಸಾರಿದವರು.
ಶೋಷಿತ ಸಮುದಾಯಗಳ ಜೀವನಾಡಿ ‘ಮೀಸಲಾತಿ’ಗೆ ಬದಲಾಗಿ ‘ಪ್ರಾತಿನಿಧ್ಯ’ ಎಂಬ ಪದದ ಬಳಕೆ ಹೆಚ್ಚು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

        ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಈಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಸಿದ್ದಾಂತಗಳು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಪೂರಕವೆನಿಸಿವೆ. ಅವರು ಕೊಟ್ಟ ಸಂವಿಧಾನ ವಿಶ್ವಶ್ರೇಷ್ಠ ಸಂವಿಧಾನವಾಗಿದೆ, ಇದನ್ನು ಉಳಿಸಿ, ಬೆಳೆಸು ಕೆಲಸ ಯುಜನತೆಯದ್ದಾಗ ಬೇಕು. ಮತದಾನದ ಮಹತ್ವ ಅರಿತು ಯುವ ಜನತೆ ಸಮಾಜಮುಖಿ ನಾಯಕನನ್ನು ಆರಿಸಿ ಭವಿಷ್ಯತ್ತಿನ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು.

       ದೇಶದ ಯುವ ಜನತೆ, ಮಹಿಳೆಯರು, ಅಂಧರು, ದುಬರ್ಲರು, ಶೋಷಿತರು, ಕಾರ್ಮಿಕರು, ರೈತರು ಎಲ್ಲರೂ ಏಕಮನಸ್ಕರಾಗಿ ಅಂಬೇಡ್ಕರ್ ರಚಿಸಿದ ಸಂವಿಧಾನ ಉಳಿಸಿ, ಸಂರಕ್ಷಿಸಲು ಕಂಕಣಬದ್ಧರಾಗೋಣವೆಂದು ಆಶಿಸಿದರು. ಇದೇ ವೇಳೆ ತುಮಕೂರು ವಿಶ್ವವಿಧ್ಯಾನಿಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಡಾ.ಎಂ.ಯು.ಲೋಕೇಶ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.

       ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ಕೃಷ್ಣಪ್ಪ, ಪ್ರೊ.ಕೆ.ಎಸ್.ಕುಮಾರ್, ಎಲ್.ಎಂ.ಜಯಣ್ಣ, ಆನಂದ್‍ಕುಮಾರ್, ಜಿ.ಟಿ.ರಂಗನಾಥ್, ರಂಗನಾಥ್, ರಾಗವೇಂದ್ರ, ವಸಂತ್‍ಕುಮಾರ್, ಮಂಜುನಾಥ್, ಮನೋಹರ್, ಕುಮಾರಸ್ವಾಮಿ, ಆಶಾ ಸ್ಭೆರಿದಂತೆ ಇತರರು ಇದ್ದರು. ಕಿರಣ್ ನಿರೂಪಿಸಿ, ಮಂಜುನಾಥ್ ಸ್ವಾಗತಿಸಿ, ಶೋಭಾ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link