ತುಮಕೂರು ವಿವಿ ಜೊತೆ ಸೆರಾಜೇ ಮೊನಾಸ್ಟಿಕ್ ವಿವಿ ಶೈಕ್ಷಣಿಕ ಒಡಂಬಡಿಕೆ

ತುಮಕೂರು

       ತುಮಕೂರು ವಿಶ್ವವಿದ್ಯಾನಿಲಯ ಮತ್ತು ಬೈಲಕುಪ್ಪೆಯ ಸೆರಾಜೇ ಮೊನಾಸ್ಟಿಕ್ ವಿಶ್ವವಿದ್ಯಾನಿಲಯಗಳ ನಡುವಿನ 2019-20 ನೇ ಶೈಕ್ಷಣಿಕ ವರ್ಷದ ಒಪ್ಪಂದಕ್ಕೆ ಏಪ್ರಿಲ್ 2ರಂದು ಸಹಿಮಾಡಲಾಯಿತು.

       ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಮತ್ತು ಸೆರಾಜೇ ಮೊನಾಸ್ಟಿಕ್ ವಿಶ್ವವಿದ್ಯಾನಿಲಯದ ಪ್ರಧಾನ ಕಾರ್ಯದರ್ಶಿ ಗೆಶೆ ನವಾಂಗ್‍ಜಾಂಗ್ಪೋರವರು ಒಡಂಬಡಿಕೆಯನ್ನು ಸಹಿಮಾಡಿ ಹಸ್ತಾಂತರಿಸಿಕೊಂಡರು. ಈ ಸಮಯದಲ್ಲಿ ಸೆರಾಜೇಮೊನಾಸ್ಟಿಕ್ ವಿಶ್ವವಿದ್ಯಾನಿಲಯz ಆಧುನಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಗೆಶೆ ನವಾಂಗ್ ನೊರ್ಬು ಮತ್ತು ಸಮಾಜಕಾರ್ಯ ವಿಭಾಗದ ಅಧ್ಯಕ್ಷರಾದ ಪ್ರೊ. ಕೆ.ಜಿ. ಪರಶುರಾಮ ಉಪಸ್ಥಿತರಿದ್ದರು.

         ಪ್ರಸಕ್ತ ಸಾಲಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಮತ್ತು ಸೆರಾಜೇ ಮೊನಾಸ್ಟಿಕ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಮತ್ತು ಬೋಧಕರ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಮೊದಲನೇ ಹಂತದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಮತ್ತು ಮನೋವಿಜ್ಞಾನದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೆರಾಜೇ ಮೊನಾಸ್ಟಿಕ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲು ತೀರ್ಮಾನಿಸಲಾಗಿದೆ.

          ದಲೈಲಾಮಾರವರ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಲು ತೀರ್ಮಾನಿಸಲಾಯಿತು. ಮೊದಲನೆ ಭಾಗವಾಗಿ ಕೈಂಡ್‍ನೆಸ್ ಕ್ಲಾರಿಟಿ ಅಂಡ್ ಇನ್‍ಸೈಟ್ ಎಮಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ, ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಕಟಿಸಲಾಗುವುದು. ಪ್ರತಿ ವರ್ಷವು ಒಂದು ಪುಸ್ತಕವನ್ನು ಭಾಷಾಂತರಿಸಿ ಪ್ರಕಟಿಸಲು ತೀರ್ಮಾನಿಸಲಾಯಿತು.

         ಸೆರಾಜೇಮೊನಾಸ್ಟಿಕ್ ವಿಶ್ವವಿದ್ಯಾನಿಲಯದ ಸಾಹಿತ್ಯಾಭಿವೃದ್ಧಿಗಾಗಿ ತುಮಕೂರು ವಿಶ್ವವಿದ್ಯಾನಿಲಯದ ನುರಿತ ಸಂಪನ್ಮೂಲ ವ್ಯಕ್ತಿಗಳ ತಂಡವನ್ನು ಸಂಕಲನ ಪರಿಷ್ಕರಣೆಗೆ ಗುರುತಿಸಲಾಯಿತು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link