ಅಗ್ಗದ ಬೆಲೆಯ ಫ್ಲಾಟ್ ಕೊಡಿಸುವುದಾಗಿ ಹೇಳಿ ಮೋಸ !!

ಬೆಂಗಳೂರು:

          ಅಗ್ಗದ ಬೆಲೆಗೆ ಫ್ಲ್ಯಾಟ್‍ಗಳನ್ನು ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆಪಾದನೆಯಡಿ ನಿತೇಶ್ ಕನ್‍ಸ್ಟ್ರಕ್ಷನ್ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರ ಕಚೇರಿ ಹಾಗೂ ಎರಡು ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

        ದಾಳಿಯಲ್ಲಿ ಭೂವ್ಯವಹಾರಕ್ಕೆ ಸಂಬಂಧಿಸಿದ ಕೋಟ್ಯಂತರ ರೂ. ಮೌಲ್ಯದ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಎಂಜಿ ರಸ್ತೆಯ ಟ್ರಿನಿಟ್ ವೃತ್ತ ಕಚೇರಿ ಹೊಂದಿರುವ ಸಂಸ್ಥೆಯ ಮಾಲೀಕ ನಿತೇಶ್ ಶೆಟ್ಟಿ ಸಂಜಯನಗರ ಹಾಗೂ ಲ್ಯಾವೆಲ್ಲೆ ರಸ್ತೆ ಎರಡು ಮನೆಗಳನ್ನು ಹೊಂದಿದ್ದಾರೆ.

        ಕಂಪನಿ ವಿರುದ್ಧ 15ಕ್ಕೂ ಅಧಿಕ ಮಂದಿ ದೂರು ಕೊಟ್ಟಿದ್ದರು ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.ಈ ಸಂಸ್ಥೆಯ ಅಧಿಕಾರಿಗಳ ವಿಲಾ ಹಾಗೂ ಫ್ಲ್ಯಾಟ್‍ಗಳನ್ನು ನೀಡುವುದಾಗಿ 50ಕ್ಕೂ ಹೆಚ್ಚು ಮಂದಿಯಿಂದ 125 ಕೋಟಿಯಷ್ಟು ಹಣ ಪಡೆದಿದ್ದಾರೆ. ಈಗ ಫ್ಲ್ಯಾಟ್‍ಗಳನ್ನು ಕೊಡದೆ, ಸಂಗ್ರಹಿಸಿದ್ದ ಹಣವನ್ನೂ ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಸಂತ್ರಸ್ತರೊಬ್ಬರು ದೂರಿನಲ್ಲಿ ತಿಳಿಸಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link